ಸಂಗೀತಗಾರ ಬಾಲಭಾಸ್ಕರ್ ಕಾರು ಅಪಘಾತ : 2 ವರ್ಷದ ಮಗು ಸಾವು – ದಂಪತಿ ಸ್ಥಿತಿ ಚಿಂತಾಜನಕ

ಕೇರಳದ ಖ್ಯಾತ ಸಂಗೀತ ಸಂಯೋಜಕ, ವೈಯಲಿನ್ ವಾದಕ ಬಾಲಭಾಸ್ಕರ್ ಅವರ ಕಾರು ಮಂಗಳವಾರ ಭೀಕರ ಅಪಘಾತಕ್ಕೀಡಾಗಿದ್ದು, ಘಟನೆಯಲ್ಲಿ ಬಾಲಭಾಸ್ಕರ್ ಅವರ 2 ವರ್ಷದ ಮುದ್ದಾದ ಮಗು ತೇಜಸ್ವಿನಿ ಮೃತಪಟ್ಟಿದ್ದಾಳೆ. ಬಾಲಭಾಸ್ಕರ್ ಹಾಗೂ ಪತ್ನಿ ಲಕ್ಷ್ಮಿ ಗಂಭೀರವಾಗಿ ಗಾಯಗೊಂಡಿದ್ದು ದಂಪತಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.

Image result for balabhaskar accident

ಬಾಲಭಾಸ್ಕರ್ ಅವರು ತಮ್ಮ ಕುಟುಂಬದೊಂದಿಗೆ ತ್ರಿಶೂರಿನಿಂದ ವಾಪಸಾಗುತ್ತಿದ್ದ ವೇಳೆ ಕಾರು ಪಳ್ಳಿಪ್ಪುರಮ್ ನಲ್ಲಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಬೆಳಗಿನ ಜಾವ ಚಾಲಕನ ನಿಯಂತ್ರಣ ತಪ್ಪಿದ್ದರಿಂದ ದುರ್ಘಟನೆ ನಡೆದಿದೆ ಎನ್ನಲಾಗುತ್ತಿದೆ.

Image result for balabhaskar accident

ಬಾಲಭಾಸ್ಕರ್ ಪುತ್ರಿ 2 ವರ್ಷದ ತೇಜಸ್ವಿನಿ ಬಾಲಾ ಮೃತಪಟ್ಟಿದ್ದಾಳೆ ಎಂದು ಖಾಸಗಿ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಬಾಲಭಾಸ್ಕರ್ ಹಾಗೂ ಪತ್ನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

 

Leave a Reply

Your email address will not be published.