ದುನಿಯಾ ವಿಜಯ್​ ಚಿತ್ರರಂಗದಿಂದ ಬಹಿಷ್ಕಾರ​ : ಫಿಲ್ಮ್​ ಚೇಂಬರ್​ ಹೇಳಿದ್ದೇನು..?

ಜಿಮ್​ ಟ್ರೈನರ್​ ಮಾರುತಿಗೌಡನನ್ನು ಅಪಹರಿಸಿ ವಿಜಯ್​ ಹಲ್ಲೆ  ನಡೆಸಿದ್ದು, ಕರಿಚಿರತೆ ಇದೀಗ ಪರಪ್ಪನ ಅಗ್ರಹಾರದಲ್ಲಿ ವಿಚಾರಣಾಧೀನ ಕೈದಿಯಾಗಿ ಸೆರೆವಾಸ ಅನುಭವಿಸುತ್ತಿರುವ ದುನಿಯಾ ವಿಜಿಯನ್ನು ಚಿತ್ರರಂಗದಿಂದಲೇ ಬಹಿಷ್ಕಾರ ಹಾಕಬೇಕು ಎಂಬ ಗಾಂಧಿನಗರದಿಂದ  ಕೇಳಿಬರುತ್ತಿದೆ.

 

ಜಿಮ್​ ಟ್ರೈನರ್​ಗೆ ಹಲ್ಲೆ ನಡೆಸಿದ ವಿಜಯ್​ ವಿರುದ್ದ ಪಾನಿಪುರಿ ಕಿಟ್ಟಿ ಫಿಲ್ಮಿ ಚೇಂಬರ್​ಗೆ ದೂರು ನೀಡಿದ್ದಾರೆ.ಕನ್ನಡ ಚಳುವಳಿ ಒಕ್ಕೂಟವು ದುನಿಯಾ ವಿಜಿ ವಿರುದ್ಧ ಫಿಲ್ಮ್ ಚೇಂಬರ್ ಗೆ ದೂರು ನೀಡಿದ್ದು, ದೂರಿನಲ್ಲಿ ದುನಿಯಾ ವಿಜಯ್ ರನ್ನು ಚಿತ್ರರಂಗದಿಂದ ಹೊರ ಹಾಕುವಂತೆ ಒತ್ತಾಯಿಸಿದ್ದಾರೆ.

 

ಈ ಬಗ್ಗೆ ವಾಣಿಜ್ಯ ಮಂಡಳಿ ಅಧ್ಯಕ್ಷ ಚಿನ್ನೇಗೌಡ ಪ್ರತಿಕ್ರಿಯಿಸಿದ್ದು,’ದುನಿಯಾ ವಿಜಿ ಪ್ರಕರಣ ಕೊರ್ಟ್ ನಲ್ಲಿದೆ. ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವುದರಿಂದ ನಾವು ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಇದು ಅವರ ವೈಯಕ್ತಿಕ ವಿಚಾರ ಆಗಿರುವುದರಿಂದ ಚಿತ್ರರಂಗದಿಂದ ಬಹಿಷ್ಕಾರ ಸಾಧ್ಯವಿಲ್ಲ” ಎಂದು ಚಿನ್ನೇಗೌಡ ತಿಳಿಸಿದ್ದಾರೆ.

2 thoughts on “ದುನಿಯಾ ವಿಜಯ್​ ಚಿತ್ರರಂಗದಿಂದ ಬಹಿಷ್ಕಾರ​ : ಫಿಲ್ಮ್​ ಚೇಂಬರ್​ ಹೇಳಿದ್ದೇನು..?

Leave a Reply

Your email address will not be published.