ದರ್ಶನ್​ ಕಾರು ಅಪಘಾತ : ಬೇಗ ಗುಣಮುಖನಾಗು, ಕುಚುಕು ಗೆಳಯನಿಗೆ ಕಿಚ್ಚನ ಹಾರೈಕೆ..!

ಬೆಂಗಳೂರು  : ದರ್ಶನ್​ ಕಾರು ಅಪಘಾತದಿಂದ ದಚ್ಚು ಬಲ ಕೈಗೆ  ಮುರಿದ್ದು, ದರ್ಶನ್​ ಗುಣಮುಖವಾಗಲಿ ಎಂದು ಅವರ ಅಭಿಮಾನಿಗಳು ಬೇಡಿಕೊಳ್ಳುತ್ತಿದ್ದು, ಇತ್ತ ಕಿಚ್ಚ ಸುದೀಪ ಕೋಪವನ್ನು ಮರೆತು ಬೇಗ ಚೇತರಿಸಿಕೋ ಗೆಳೆಯ ಎಂದು ಆರೈಸಿದ್ದಾರೆ.ಸಂಬಂಧಿತ ಚಿತ್ರ

ಮೈಸೂರಿನಿದ ಬರುವಾಗ ನಡೆದ ಅಪಘಾತದಿಂದ ದರ್ಶನಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದನ್ನು ತಿಳಿದ ಕಿಚ್ಚ ಸುದೀಪ್​ ತಮ್ಮ ನಡುವಿನ ಕೊಪವನ್ನು ದೂರ ತಳ್ಳಿ ಟ್ವೀಟರ್​ನಲ್ಲಿ ದರ್ಶನ್​ಗೆ  ಹಾರೈಸಿದ್ದಾರೆ, ‘ನೀನು ಆರೋಗ್ಯವಾಗಿದ್ದೀಯಾ ಎಂದು ಕೇಳಿ ತುಂಬಾ ಸಂತೋಷವಾಯಿತು. ಆದಷ್ಟೂ ಬೇಗ ಚೇತರಿಸಿಕೋ ಗೆಳೆಯ ಎಂದು ಹಾರೈಸುತ್ತೇನೆ’ ಎಂದು ಟ್ವೀಟ್​ ಮಾಡಿದ್ದಾರೆ.

ಇನ್ನು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿರುವ ನಟ ದರ್ಶನ್, ದೇವರಾಜ್, ಪ್ರಜ್ವಲ್ ದೇವರಾಜ್ ಅವರು ಆರೋಗ್ಯವಾಗಿದ್ದಾರೆ. ದರ್ಶನ್ ಬಲಗೈಗೆ ಗಾಯವಾಗಿದ್ದು, ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಬಹುಶಃ ನಾಳೆ ದರ್ಶನ್ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಬಹುದು ಎಂದು ಬಲ್ಲಮೂಲಗಳಿಂದ ತಿಳಿದುಬಂದಿದೆ.

 

 

Leave a Reply

Your email address will not be published.