ಶ್ರೀರಾಮಸೇನೆಯ ಮಹಿಳಾ ಅಧ್ಯಕ್ಷೆಯಾಗಿರುವ ರೌಡಿಶೀಟರ್​ ಯಶಸ್ವಿನಿಯನ್ನು ಕೈಬಿಡೋದಿಲ್ಲ : ಮುತಾಲಿಕ

ಹಿಂದು ಸಂಘಟನೆ ಶ್ರೀರಾಮಸೇನೆಯ ಬೆಂಗಳೂರು ನಗರ ಮಹಿಳಾ ಘಟಕದ ಅಧ್ಯಕ್ಷೆಯಾಗಿ ಯಶಸ್ವಿನಿ ನೇಮಕವಾಗಿದ್ದು ಭಾರೀ ವಿವಾದಕ್ಕೆ ಕಾರಣವಾಗಿದೆ.  ಈ ಬಗ್ಗೆ ಮುತಾಲಿಕ್​ ಯಶಸ್ವಿನಿಯನ್ನು ಬದಲಿಸುವ ಸಾಧ್ಯವಿಲ್ಲವೆಂದು ತಿಳಿಸಿದ್ದಾರೆ.

ಶ್ರೀರಾಮಸೇನೆಯ ಬೆಂಗಳೂರು ಘಟಕದ ಅಧ್ಯಕ್ಷೆಯಾಗಿ ಮೀಟರ್ ಬಡ್ಡಿ ದಂಧೆ ನಡೆಸುವ ಮಹಿಳೆ ಹಾಗೂ ರೌಡಿಶೀಟರ್​​ ಯಶಸ್ವಿನಿ ಗೌಡ್​ ಅವರನ್ನು ನೇಮಿಸಲಾಗಿದೆ.ಇನ್ನು ಯಶಸ್ವಿನಿ ನೇಮಕದ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಮೋದ್​ ಮುತಾಲಿಕ, ‘ಕುಡುಕರು ಕೂಡ ನಮ್ಮ ಸಂಘಟನೆಗೆ ಸೇರಿ ಬದಲಾಗಿದ್ದಾರೆ. ಹೀಗಾಗಿ ಇವರು ಕೂಡ ಬದಲಾಗಬಹುದು. ಅವರು ಶ್ರೀರಾಮಸೇನೆಯ ಜೊತೆ ಸಮಾಜಮುಖಿ ಕೆಲಸದಲ್ಲಿ ಪಾಲ್ಗೊಳ್ಳುವ ನೀರಿಕ್ಷೆ ಇದೆ’ ಎಂದು ತಿಳಿಸಿದ್ರು.  

ಇವರನ್ನು ಅದ್ಯಕ್ಷೆ ಮಾಡಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲೂ ಕೂಡ ಹಲವು ಪ್ರಕರಣಗಳು ದಾಖಲಾಗಿದೆ.

 

 

 

Leave a Reply

Your email address will not be published.