ಸೂರ್ಯನ ಸುತ್ತ ವೃತಾಕಾರದಲ್ಲಿ ಕಾಮನ ಬಿಲ್ಲಿನ ರಂಗು : ಆಕಾಶ ನೋಡುತ್ತಾ ಜನರ ಸಂಭ್ರಮ..!

ಶಿವಮೊಗ್ಗದಲ್ಲಿ  : ರಾಜ್ಯದ ಹಲವೆಡೆ ಸೂರ್ಯನ ಸುತ್ತ ಕಾಮನ ಬಿಲ್ಲು ಕಾಣಿಸಿಕೊಂಡಿದೆ. ಸೂರ್ಯನ ಸುತ್ತ ಉಂಗುರ ಆಕಾರದಲ್ಲಿ ಕಾಮನ ಬಿಲ್ಲು ಮೂಡಿದ್ದು, ಶಿವಮೊಗ್ಗದಲ್ಲಿ ಜನರು ಆಕಾಶ ನೋಡುತ್ತ ಸಂತೋಷ ಪಡುತ್ತಿದ್ದಾರೆ.

ಸೂರ್ಯನ ಸುತ್ತ ಸೂರ್ಯನ  ಆಕಾರದ ಕಾಮನ ಬಿಲ್ಲು ಶಿವಮೊಗ್ಗದಲ್ಲಿ ಮಧ್ಯಾಹ್ನ 12 ಗಂಟೆಗೆ ಕಾಣಿಸಿಕೊಂಡಿತ್ತು. ಈ ಕಾಮನಬಿಲ್ಲು ಸುಮಾರು ಹೊತ್ತು  ಕಾಲ ಇತ್ತು.  ಸೂರ್ಯನ ಸುತ್ತ ವೃತಕಾರದಲ್ಲಿ​ ಕಾಣಿಸಿಕೊಂಡ ಫೋಟೋ, ವಿಡಿಯೋ ವಾಟ್ಸಪ್ ನಲ್ಲಿ ವೈರಲ್ ಆಗುತ್ತಿದೆ. ಶಾಲಾ ಮಕ್ಕಳು, ಕಚೇರಿ ಸಿಬ್ಬಂದಿ, ಸಾರ್ವಜನಿಕರು ಈ ವಿಸ್ಮಯವನ್ನು ಕಣ್ತುಂಬಿಕೊಂಡರು.

 

ವಾತಾವರಣದಲ್ಲಿ ನೀರಿನ ಹನಿಗಳು ಜಾಸ್ತಿ ಇದ್ದರೆ ಬೆಳಕಿನ ಪ್ರತಿಫಲನ ಹಾಗೂ ವಕ್ರೀಭವನ ಆಗುವುದೇ ಕಾಮನಬಿಲ್ಲಿಗೆ ಕಾರಣವಾಗುತ್ತದೆಂದು ಹೇಳಲಾಗುತ್ತಿದೆ. ಸೂರ್ಯನ ಪ್ರಭಾ ವಲಯದಿಂದ ಕಿರಣಗಳು ಮಳೆ ಮೋಡವನ್ನು ಭೇದಿಸಿಕೊಂಡು ಭೂಮಿಗೆ ಬರುವಾಗ ಏಳು ಬಣ್ಣಗಳ ವೃತ್ತಾಕಾರ ಮೂಡುತ್ತದೆ.

Leave a Reply

Your email address will not be published.