ಮೊದಲಬಾರಿಗೆ ದಸರಾದಲ್ಲಿ ನಡೆಯುತ್ತಿರುವ ಕಾರ್​ ರೇಸ್​ನಲ್ಲಿ ದರ್ಶನ್​ ಭಾಗವಹಿಸುವುದಿಲ್ಲ : S R ಮಹೇಶ್​

ಮೈಸೂರು :  ನಾಡ ಹಬ್ಬ ದಸರದಲ್ಲಿ ಇದೇ ಮೊಟ್ಟಮೊದಲ ಬಾರಿಗೆ ಕಾರ್​ ರೇಸ್​ ನಡೆಯುತ್ತಿದ್ದು, ಈ ಬಾರಿ ನಟ ದರ್ಶನ್​ ಭಾಗವಹಿಸುವುದು ಅಸಾಧ್ಯ ಎಂದು ಸಚಿವ ಸಾ. ರಾ. ಮಹೇಶ್​​ ತಿಳಿಸಿದ್ದಾರೆ.

ಇಂದು ನಡೆದ ಕಾರ ಅಪಘಾತದಿಂದ ನಟ ದರ್ಶನ್​ ಗೆ ಕೈಮೂಳೆ ಮುರಿದಿದ್ದು, ದಸರದಲ್ಲಿ ಮೊಟ್ಟಮೊದಲ ಬಾರಿಗೆ ಆಯೋಜಿಸಿದ್ದ ಕಾರ್​ ರೇಸ್​ ನಲ್ಲಿ ದಚ್ಚು ಭಾಗವಹಿಸೊದು ಅಸಾಧ್ಯವಾಗಿದೆ. ಮೈಸೂರಿನ ಕೊಲಂಬಿಯಾ ಏಷ್ಯಾದಲ್ಲಿ ದರ್ಶನ್​ ಯೋಗಕ್ಷೇಮ ವಿಚಾರಿಸಿ ಮಾತನಾಡಿದ ಸಚಿವ ಸಾ. ರಾ. ಮಹೇಶ್​, ಅಪಘಾತ ಹೇಗೆ ಆಯ್ತು ಅನ್ನೋದಕ್ಕಿಂತ ಅವರ ಚೇತರಿಕೆ ಮುಖ್ಯ, ಈಗಾಗಲೇ ಪ್ರಕರಣ ಸಂಬಂಧ ನಾನು ಪೊಲೀಸರ ಬಳಿ ಮಾಹಿತಿ ಪಡೆದಿದ್ದೇನೆ. ಸದ್ಯ ಎಲ್ಲರೂ ಬೇಗ ಗುಣ ಮುಖರಾಗಲಿ ಅಂತ ನಾನು ಬೇಡಿಕೊಳ್ಳುತ್ತೇನೆ’ ಎಂದು ಅವರು ತಿಳಿಸಿದ್ರು.

ದರ್ಶನ್, ದೇವರಾಜ್, ಪ್ರಜ್ವಲ್ ದೇವರಾಜ್ ಸ್ವಲ್ಪ ಚೇತರಿಸಿಕೊಂಡಿದ್ದಾರೆ. ಸದ್ಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬಳಿಕ ವಾರ್ಡ್​ಗೆ ಶಿಫ್ಟ್ ಮಾಡುವುದಾಗಿ ವೈದ್ಯರು ತಿಳಿಸಿದ್ದಾರೆ ಎಂದು ಸಚಿವ ಸಾ.ರಾ ಮಹೇಶ್​ ತಿಳಿಸಿದ್ರು.

Leave a Reply

Your email address will not be published.