ರಾಜಕೀಯದಲ್ಲಿ ನಾನೇನು ಸನ್ಯಾಸಿಯಲ್ಲ, ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿ : ಎಂ.ಟಿ.ಬಿ ನಾಗರಾಜ್

‘ ರಾಜಕೀಯದಲ್ಲಿ ‌ನಾನೇನು ಸನ್ಯಾಸಿ ಅಲ್ಲ.. ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೇನೆ ‘ ಎಂದು ಕೆ ಸಿ ವೇಣುಗೋಪಾಲ್ ಜೊತೆಗಿನ ಮಾತುಕತೆಯ ಬಳಿಕ ಶಾಸಕ ಎಂಟಿಬಿ ನಾಗರಾಜ್ ಹೇಳಿಕೆ ನೀಡಿದ್ದಾರೆ.

‘ ನಾನು ಇಲ್ಲಿಗೆ ಸಚಿವ ಸ್ಥಾನ ಕೇಳುವುದಕ್ಕೆ ಬಂದಿಲ್ಲ. ಬದಲಾಗಿ ಸಣ್ಣ ಪುಟ್ಟ ಸಮಸ್ಯೆಗಳ ಬಗ್ಗೆ ಚರ್ಚೆಗೆ ಬಂದಿದ್ದೆ. ಆ ಸಣ್ಣ ಪುಟ್ಟ ಸಮಸ್ಯೆಗಳು ಬಗೆ ಹರಿಸುವ ಭರವಸೆ ಸಿಕ್ಕಿದೆ ‘ ಎಂದಿದ್ದಾರೆ.

‘ ಸಿದ್ದರಾಮಯ್ಯನವರು ನಮಗೆ ಮೊದಲಿನಿಂದಲೂ ಆತ್ಮೀಯ ಸ್ನೇಹಿತರು‌. ಅವರು ಹಾಗು‌ ನನ್ನ ನಡುವೆ ಯಾವುದೇ ಮನಸ್ತಾಪ ಇಲ್ಲ. ನಾಳೆ ಸಿದ್ದರಾಮಯ್ಯರನ್ನು ಭೇಟಿ ಮಾಡ್ತೇನೆ ‘ ಎಂದು ಕೆ ಕೆ ಗೆಸ್ಟ್ ಹೌಸ್ ಬಳಿ ಶಾಸಕ ಎಂಟಿಬಿ ನಾಗರಾಜ್ ಹೇಳಿದ್ದಾರೆ.

Leave a Reply

Your email address will not be published.