ಸರ್ಕಾರ ಉಳಿಸೋ ಜವಾಬ್ದಾರಿ ನನ್ನ ಮೇಲಿದೆ, ನಿನ್ನ ಸಮಸ್ಯೆ ಏನೇ ಇದ್ರೂ ನಾನಿದ್ದೇನೆ : ಸುಧಾಕರಗೆ ಸಿದ್ದು ಪಾಠ

ಏನಯ್ಯ ನಿನ್ನ ಕತೆ.. ಪಕ್ಷದಲ್ಲಿದ್ದು, ಹೈಕಮಾಂಡ್ ತೀರ್ಮಾನದ ವಿರುದ್ಧ ಹೋದ್ರೆ ಹೇಗೆ ? ಕೆ ಸುಧಾಕರಗೆ ಮಾಜಿ ಸಿಎಂ ಸಿದ್ದರಾಮಯ್ಯ ಪಾಠ ಮಾಡಿದ್ದಾರೆ.

 

ಅತೃಪ್ತ ಶಾಸಕ ಡಾ. ಸುಧಾಕರ್​ಗೆ ತರಾಟೆ ತೆಗೆದುಕೊಂಡ ಸಿದ್ದರಾಮಯ್ಯ, ‘ಏನಯ್ಯ ನಿನ್ನ ಕತೆ.. ಪಕ್ಷದಲ್ಲಿದ್ದು, ಹೈಕಮಾಂಡ್ ತೀರ್ಮಾನದ ವಿರುದ್ಧ ಹೋದ್ರೆ ಹೇಗೆ ? ಸರ್ಕಾರ ಉಳಿಸೋ ಜವಾಬ್ದಾರಿ ನನ್ನ ಮೇಲಿದೆ. ನೀನು ನನ್ನ ಜೊತೆಗಿದ್ದವನು, ನೀನೇ ಹೀಗೆ ಮಾಡಿದ್ರೆ ಹೇಗೆ ? ನೀನು ಹೀಗೆ ಮಾಡಿದ್ರೆ ಬೇರೆಯವರು ನನ್ನ ಬಗ್ಗೆ ಏನ್ಮಾತಾಡ್ಕೊತ್ತಾರೆ ? ನಿನ್ನ ಸಮಸ್ಯೆ ಏನೇ ಇದ್ರೂ ನಾನಿಲ್ವಾ ? ಪಕ್ಷ ಇಲ್ವಾ, ಏಕಾಏಕಿ ಮಾಧ್ಯಮದವರನ್ನ ಕರೆದುಕೊಂಡು ಹೋದ್ರೆ ಹೇಗೆ ? ಅದೆಲ್ಲಾ ಬಿಟ್ಟಾಕು. ಪಕ್ಷದಲ್ಲಿರು. ನಿನ್ನ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡ್ತೇನೆ ಎಂದು ಸುಧಾಕರಗೆ ಸಿದ್ದು ಪಾಠ ಮಾಡಿದ್ದಾರೆ.

Leave a Reply

Your email address will not be published.