ನನಗೆ ಏನೂ ಆಗಿಲ್ಲ, ನೀವು ಆರಾಮಾಗಿರಿ : ಅಭಿಮಾನಿಗಳಿಗೆ ದಚ್ಚು ವಾಯ್ಸ್​ ಮೆಸೇಜ್​..!

ಮೈಸೂರು : ಮುಂಜಾನೆ ನಡೆದ ದರ್ಶನ್​ ಕಾರು ಅಪಘಾತವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ದರ್ಶನ್​ ಸ್ವತಃ ಅಭಿಮಾನಿಗಳಿಗೆ ವಾಯ್ಸ್​ ಮೆಸೇಜ್​ ಕಳುಹಿಸಿದ್ದಾರೆ.

ದರ್ಶನ್​ ಹಾಗೂ ದೇವರಾಜ್​ ಕೈ ಗೆ ಗಂಭೀರ ಗಾಯವಾಗಿದ್ದು, ದಚ್ಚು ಬಲಗೈ ಮೂಳೆ ಮುರಿದಿದ್ದಿ, ಕೈಗೆ ಹೊಲಿಗೆ  ಎನ್ನಲಾಗುತ್ತಿದೆ. ಇನ್ನು ಅಭಿಮಾನಿಗಳ ಆತಂಕ ತಿಳಿದ ದರ್ಶನ್​ ವಾಯ್ಸ್​ ಮೆಸೇಜ್​ ಮಾಡಿ ಕಳುಹಿಸಿದ್ದು, ‘ನನಗೆ ಏನೂ ಆಗಿಲ್ಲ, ದಯವಿಟ್ಟು ಅಭಿಮಾನಿಗಳೆಲ್ಲರೂ ಆರಾಮಾಗಿರಿ. ಇನ್ನೊಂದೆರಡು ದಿನ ಆಸ್ಪತ್ರೆಯಲ್ಲಿದ್ದು ಬರ್ತೀನಿ. ಆಮೇಲೆ ಎಲ್ಲರಿಗೂ ಸಿಗ್ತೀನಿ. ದಯವಿಟ್ಟು ಆಸ್ಪತ್ರೆಯತ್ತ ಯಾರೂ ಬರಬೇಡಿ ಬೇರೆಯವರಿಗೆ ತೊಂದರೆಯಾಗುತ್ತದೆ ಎಂದು ನಟ ದರ್ಶನ್ ಅಭಿಮಾನಿಗಳಿಗೆ​ ಮನವಿ ಮಾಡಿಕೊಂಡಿದ್ದಾರೆ.

Leave a Reply

Your email address will not be published.