ನಟ ದರ್ಶನ್​ ಕಾರು ಅಪಘಾತ : ದಚ್ಚು, ಪ್ರಜ್ವಲ್​ ಹಾಗೂ ದೇವರಾಜ್​ಗೆ ಗಂಭೀರ ಗಾಯ..!

ಮೈಸೂರು : ಬೆಳ್ಳಂ ಬೆಳಗ್ಗೆ  ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಕಾರು ಅಪಘಾತವಾಗಿದ್ದು, ಕಾರಿನಲ್ಲಿ ಪ್ರಜ್ವಲ್​ , ದೇವರಾಜ್​ ಗಂಭೀರ ಗಾಯವಾಗಿದ್ದು ದರ್ಶನ್​ ಬಲಗೈ ಮುರಿದಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ನಿನ್ನೆ ಮೈಸೂರಿನ ಮೃಗಾಯಲಕ್ಕೆ ಭೇಟಿ ನೀಡಿದ್ದ ದರ್ಶನ್​ ಹಿಂತಿರುಗುವ ವೇಳೆ ಈ ಘಟನೆ ಸಂಭವಿಸಿದೆ. ಮೈಸೂರಿನ ಹೊರವಲಯದ ಹಿನಕಲ್ ಬಳಿ ದರ್ಶನ್​ ಕಾರಗೆ ಡಿವೈಡರ್​ ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ನಡೆದಿದ್ದು, ದರ್ಶನ್ ಬಲಗೈ ಮೂಳೆ ಮುರಿದಿದ್ದು ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

darshan devraj ಗೆ ಚಿತ್ರದ ಫಲಿತಾಂಶ

ಮೈಸೂರಿನ ಮೃಗಾಯಯಕ್ಕೆ ದರ್ಶನ, ಸೃಜನ್​, ದೇವರಾಜ್​ ಕುಟುಂಬ ಭೇಟಿ ನೀಡಿ ಪ್ರಾಣಿಗಳನ್ನು ದತ್ತು ಪಡೆದರು. ಇನ್ನ ಅರಮನೆಯ ಸುತ್ತ ಓಡಾಡಿ, ರಾಜ ಯದುವೀರ ಜೊತೆ ಮಾತನಾಡಿದ ದರ್ಶನ್​ ಜನರಿಗೆ ಪ್ರಾಣಿಗಳನ್ನು ರಕ್ಷಿಸಿ, ಪರಿಸರವನ್ನು ಉಳಿಸಿ ಎಂದು ಸಲಹೆ ನೀಡಿದ್ದರು. ಬೆಳಗ್ಗೆ ಮಳೆ ಬರುತ್ತಿದ್ದರಿಂದ ರಸ್ತೆ ಸರಿಯಾಗಿ ಕಾಣದೇ ಈ ಅಪಘಾತ ಸಂಭವಿಸಿದೆ ಎನ್ನಲಾಗುತ್ತಿದೆ. ​

Leave a Reply

Your email address will not be published.

Social Media Auto Publish Powered By : XYZScripts.com