ಜೈಲು ಪಾಲಾದ ಕರಿಚಿರತೆ : ವಿಜಿಗೆ 14 ದಿನ ನ್ಯಾಯಾಂಗ ಬಂಧನ, ಕೋರ್ಟ್​ ಆದೇಶ..!

ಬೆಂಗಳೂರು : ಜಿಮ್​ ಟ್ರೈನರ್​ ಮೇಲೆ ಹಲ್ಲೆ ನಡೆಸಿದ ದುನಿಯಾ ವಿಜಯ್​ಗೆ 14ದಿನ ನ್ಯಾಯಾಂಗ ಬಂಧನದಲ್ಲಿಡಲು 8ನೇ ಎಸಿಎಂಸಿ  ಕೋರ್ಟ್​ ಆದೇಶ ಹೊರಡಿಸಿದೆ.

ಅನವಶ್ಯಕವಾಗಿ ಜಿಮ್​ ಟ್ರೈನರ್ ಮಾರುತಿ ಗೌಡನ ​ ಮೇಲೆ  ದುನಿಯ ವಿಜಯ್​ ಹಲ್ಲೆ ನಡೆಸಿ ತಮ್ಮ ಸಂಗಡಿಗರೊಂದಿಗೆ ಗುಂಪಿನಲ್ಲಿ  ಹೊಡೆದಿದ್ದಾರೆ. ಈ ಘಟನೆಯಿಂದ ಮನನೊಂದು ಹಲ್ಲೆಗೊಳಗಾದ ಸಂಬಂಧಿ ಪಾನಿಪುರಿ ಕಿಟ್ಟಿಗೆ ಪೊಲೀಸ್​ ಠಾಣೆಯಲ್ಲಿ ವಿಜಿ ವಿರುದ್ಧ ದೂರು ದಾಖಲಿಸಿದ್ದು, ದುನಿಯ ವಿಜಯ್​ನನ್ನು 14ದಿನ ನ್ಯಾಯಂಗ್​ ಬಂಧನದಲ್ಲಿಡಲು ಕೋರ್ಟ್​ ಆದೇಶ ಹೊರಡಿಸಿದೆ.

ಜಿಮ್ ಟ್ರೇನರ್ ಮಾರುತಿಗೌಡ ಅವರನ್ನು ಕಿಡ್ನಾಪ್ ಮಾಡಿ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪ ದುನಿಯಾ ವಿಜಿ ಹಾಗೂ ಅವರ ಸ್ನೇಹಿತರ ಮೇಲಿದೆ. ದುನಿಯಾ ವಿಜಿ ಅವರ ಮಾಜಿ ಜಿಮ್ ಟ್ರೇನರ್ ಪಾನಿಪುರಿ ಕಿಟ್ಟಿ ಅವರ ಅಣ್ಣನ ಮಗನಾದ ಮಾರುತಿಗೌಡ ಅವರ ತುಟಿಗೆ 14 ಹೊಲಿಗೆಗಳನ್ನ ಹಾಕಲಾಗಿದೆ. ಕಿವಿ, ಮೂಗು, ಬಾಯಿಯ ಮೇಲೂ ಗಂಭೀರ ಗಾಯವಾಗಿದೆ. ಅವರಿನ್ನೂ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಪಾನಿಪುರಿ ಕಿಟ್ಟಿ ನೀಡಿದ ದೂರಿನ ಮೇಲೆ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ದುನಿಯಾ ವಿಜಿ, ಅವರ ಜಿಮ್ ಟ್ರೇನರ್ ಪ್ರಸಾದ್ ಹಾಗೂ ಮಣಿ ಅವರ ಮೇಲೆ 363 ಸೇರಿ ವಿವಿಧ ಐಪಿಸಿ ಸೆಕ್ಷನ್ ಅಡಿ ಕೇಸ್ ದಾಖಲಾಯಿತು.

Leave a Reply

Your email address will not be published.