ರಿಯಲ್​ ಸ್ಟಾರ್​ನ ‘ಐ ಲವ್​ ಯೂ’ ಫಸ್ಟ್​ ಲುಕ್​ ರಿಲೀಸ್​ : ಹಳೆ ಲುಕ್​ ನಲ್ಲಿ ಉಪ್ಪಿ ಇಸ್​ ಬ್ಯಾಕ್​

ಕನ್ನಡದ ಬುದ್ದಿವಂತ  

ಉಪೇಂದ್ರ ಅವರ ಸಿನಿಮಾ ಅಂದ್ರೆ ಅಲ್ಲಿ ಏನಾದರೂ  ಹೊಸದಾಗಿ ಹೇಳುವ ಪ್ರಯತ್ನದಲ್ಲಿರುತ್ತಾರೆ. ಇನ್ನ ಉಪ್ಪಿ ಅವರ  ಐ ಲವ್​ ಯೂ ಸಿನಿಮಾಗೆ  ಆರ್.ಚಂದ್ರು ಆ್ಯಕ್ಷನ್ ಕಟ್ ಹೇಳಿದ್ದು, ಈಗಾಗಲೇ ಶೇ.80ರಷ್ಟು ಶೂಟಿಂಗ್ ಕಂಪ್ಲೀಟ್‌ ಆಗಿದೆ. ಡಿಸೆಂಬರ್​ ವೇಳೆಗೆ ಸಿನಿಮಾ ತೆರೆಗೆ ತರಲು ಚಿತ್ರ ತಂಡ ಪ್ಲಾನ್ ಮಾಡಿದ್ದು, ಚಿತ್ರದಲ್ಲಿ ರಚಿತಾ ರಾಮ್​ ನಾಯಕಿಯಾಗಿದ್ದು, ಸಿನಿಮಾದಲ್ಲಿ ಆರು ಹಾಡುಗಳಿದ್ದು, ವೃತ್ತಿಯಲ್ಲಿ ವೈದ್ಯರಾಗಿರುವ ಡಾ. ಕಿರಣ್ ಚಿತ್ರಕ್ಕೆ ಟ್ಯೂನ್ ಕಂಪೋಸ್ ಮಾಡಿದ್ದಾರೆ.

ಇನ್ನ ಈ ಚಿತ್ರವೂ  ಎ, ಉಪೇಂದ್ರ ಹಾಗೂ ತಾಜ್ ಮಹಲ್ ಮತ್ತು ಚಾರ್ ಮಿನಾರ್ ಚಿತ್ರದ ಸಮ್ಮಿಶ್ರಣದಂತಿರುತ್ತೆ ಎಂದು ನಿರ್ದೇಶಕರು ಚಿತ್ರದ ತಿರುಳನ್ನು ಬಿಟ್ಟುಕೊಟ್ಟಿದ್ದಾರೆ. ಹೀಗಿರುವಾಗ ಫಸ್ಟ್ ಲುಕ್​ನಲ್ಲೂ ಕೂಡ ಉಪ್ಪಿ ಚಿತ್ರವನ್ನು ನೆನಪಿಸಿಕೊಳ್ಳುವಂತಿದೆ.

Leave a Reply

Your email address will not be published.