ಮಂಡ್ಯ : ಮೊಹರಂ ಹಬ್ಬದಲ್ಲಿ ಭಾವೈಕ್ಯತೆಯ ಹುಲಿ ವೇಷ ಕುಣಿತ…

ಮಂಡ್ಯ : ಮನೆ ಮನೆಯಲ್ಲೂ ಹುಲಿ ವೇಷಧಾರಿಗಳು. ಮಕ್ಕಳಿಗೆ ಅಚ್ಚುಮೆಚ್ಚು ಈ ಹಬ್ಬ. ಯಾಕೆಂದರೆ ಹಬ್ಬದಲ್ಲಿ ಹುಲಿವೇಷದಲ್ಲಿ‌ ಮಕ್ಕಳು ಕಂಗೊಳಿಸುತ್ತಾರೆ, ದೊಡ್ಡವರೂ ವೇಷ ಹಾಕುತ್ತಾರೆ. ಇದು ಸಕ್ಕರೆ ಜಿಲ್ಲೆಯಲ್ಲಿ ನಡೆಯುವ ವಿಶೇಷ ಮೊಹರಂ ಹಬ್ಬದ ಸಂಭ್ರಮ. ಮಳವಳ್ಳಿ ತಾಲ್ಲೂಕಿನ ಶಿವನಸಮುದ್ರ ಹಾಗೂ ಮಲ್ಲಿ ಕ್ಯಾತನಹಳ್ಳಿಯಲ್ಲಿ ಮೊಹರಂ ಹಬ್ಬವನ್ನು ಹಿಂದೂಗಳು ಆಚರಣೆ ಮಾಡಿ ಸಂಭ್ರಮ ಪಡುತ್ತಾರೆ.

ಹಿರಿಯರು ಹಾಕಿಕೊಟ್ಟ ಸಂಪ್ರದಾಯದಂತೆ ಈ ಗ್ರಾಮಸ್ಥರು ಮೊಹರಂ ಹಬ್ಬವನ್ನು ಆಚರಣೆ ಮಾಡಿಕೊಂಡು ಬಂದಿದ್ದಾರೆ. ಈ ಸಂಪ್ರದಾಯವನ್ನು ಈ ಗ್ರಾಮಸ್ಥರು ಮುಂದುವರಿಸಿಕೊಂಡು ಬರುತ್ತಿದ್ದಾರೆ. ಗ್ರಾಮದ ಪ್ರತಿಯೊಂದು ರಸ್ತೆಯಲ್ಲೂ ಹುಲಿವೇಷಧಾರಿಗಳು ಕುಣಿತ ಮಾಡೋ ಮೂಲಕ ಹಬ್ಬವನ್ನು ಆಚರಣೆ ಮಾಡುತ್ತಾರೆ. ಪ್ರತಿ ವರ್ಷ ಹಬ್ಬವನ್ನು ಮಾಡಿಕೊಂಡು ಬರುತ್ತಿದ್ದು, ಕುಣಿತವನ್ನು ನೋಡಲು ಸುತ್ತಮುತ್ತಲ ಗ್ರಾಮಸ್ಥರು ಬರುತ್ತಾರೆ. ಎಂಜಾಯ್ ಮಾಡುತ್ತಾರೆ.

Leave a Reply

Your email address will not be published.