ನಾನು ಯಾವುದೇ ಆಪರೇಷನ್‍ಗೆ ಒಳಗಾಗಿಲ್ಲ, ಇದೆಲ್ಲ ಮಾಧ್ಯಮಗಳ ಸೃಷ್ಟಿ : ಕೆ. ಸುಧಾಕರ್ ಟ್ವೀಟ್

ಚಿಕ್ಕಬಳ್ಳಾಪುರ : ಕಾಂಗ್ರೆಸ್ ಅತೃಪ್ತ ಶಾಸಕ ಡಾ.ಕೆ.ಸುಧಾಕರ್ ರ ಮತ್ತೊಂದು ಟ್ವೀಟ್ ಮಾಡಿದ್ದಾರೆ. ‘ ಸದ್ಯದ ರಾಜಕೀಯ ಬೆಳವಣಿಗೆಯಿಂದ ನಾನು ತೀವ್ರ ಗಾಭರಿಗೊಂಡಿದ್ದೇನೆ. ಈ ಗಾಭರಿಯಿಂದ ದೇವಸ್ಥಾನ ಭೇಟಿ ಮಾಡೋಕು ಸಾಧ್ಯವಾಗ್ತಿಲ್ಲ. ರಾಜಕೀಯ ಪಿತೂರಿಯಿಂದಾಗಿ ಬೇಸತ್ತು ದೇವಸ್ಥಾನಕ್ಕೆ ಬಂದಿದ್ದೆ ‘ ಎಂದಿದ್ದಾರೆ.

‘ ಎಂ.ಟಿ.ಬಿ ನಾಗರಾಜ್ ಸೇರಿ ಕೆಲ ಸ್ನೇಹಿತರ ಜೊತೆ ತಮಿಳುನಾಡಿನ ದೇವಸ್ಥಾನಕ್ಕೆ ಬಂದಿದ್ದೆನೆ, ನನ್ನ ವಿರುದ್ದ ರಾಜಕೀಯ ಪಿತೂರಿ ನಡೆಸಲಾಗುತ್ತಿದೆ, ಇದನ್ನೇ ಕೆಲ ಮಾಧ್ಯಮಗಳು ಬಂಡವಾಳ ಮಾಡಿಕೊಂಡಿವೆ, ಆಪರೇಷನ್ ಕಮಲ ಅಂತೆಲ್ಲಾ ಸೃಷ್ಠಿ ಮಾಡಲಾಗುತ್ತಿದೆ, ನಾನು ಯಾವುದೇ ಆಪರೇಷನ್‍ಗೆ ಒಳಗಾಗಿಲ್ಲ, ಇದೆಲ್ಲ ಮಾಧ್ಯಮಗಳ ಸೃಷ್ಠಿ ‘ ಎಂದು ಚಿಕ್ಕಬಳ್ಳಾಪುರ ಶಾಸಕ ಡಾ.ಕೆ.ಸುಧಾಕರ್ ಟ್ವೀಟ್ ಮಾಡುವ ಮೂಲಕ ಸ್ಪಷ್ಟನೆ ನೀಡಿದ್ದಾರೆ.

ಸಾಮಾಜಿಕ ಜಾಲತಾಣ ಟ್ವೀಟರ್ ಮೂಲಕ ಸಿದ್ದರಾಮಯ್ಯ ಸೇರಿ ಎಲ್ಲರಿಗೂ ಚಿಕ್ಕಬಳ್ಳಾಪುರ ಶಾಸಕ ಡಾ.ಕೆ.ಸುಧಾಕರ್ ಪರೋಕ್ಷ ಉತ್ತರ ನೀಡಿದ್ದಾರೆ.

Leave a Reply

Your email address will not be published.