ಅನವಶ್ಯಕ ದುಂದು ವೆಚ್ಚ ಮಾಡುವ ಬದಲು ಪ್ರಾಣಿಗಳನ್ನು ದತ್ತು ತೆಗೆದುಕೊಳ್ಳಿ : ದರ್ಶನ್​ ಸಲಹೆ

ಮೃಗಾಲಯದಲ್ಲಿ ಭೇಟಿ ನೀಡಿದ ವೇಳೆ ಮಾತನಾಡಿದ ದರ್ಶನ್​, ನಾವು ಕಾಡಿಗೆ ಹೋಗುತ್ತಿದ್ದೇವೆ, ಆದ್ದರಿಂದ ಕಾಡಿನ ಪ್ರಾಣಿಗಳು ನಾಡಿಗೆ ಬರುತ್ತಿದೆ. ಕಾಡಿನ ಅತಿಕ್ರಮ ಪ್ರವೇಶ ಮಾಡಬಾರದು ಪ್ರಾಣಿಗಳ‌ ರಕ್ಷಣೆ ಅತಿ ಮುಖ್ಯ ಎಂದು ಸಲಹೆ ನೀಡಿದರು. ವಿಕೆಂಡ್​​​​​​​ಗಾಗಿ ಸಾವಿರಾರು ರೂ. ಖರ್ಚು ಮಾಡಿ ಮೋಜು-ಮಸ್ತಿ ಮಾಡುವುದಕ್ಕಿಂತ ಅದೆ ಹಣವನ್ನು ಉಳಿಸಿ ಪ್ರಾಣಿಗಳನ್ನ ದತ್ತು ಪಡೆಯಲಿ. ಕಾಡು ಪ್ರಾಣಿಗಳನ್ನ‌ ಮನೆಯಲ್ಲಿ ಸಾಕಲು ಸಾಧ್ಯವಿಲ್ಲ. ಈ ಕಾರಣದಿಂದ ಮೃಗಾಲಯಕ್ಕೆ ಬಂದು ದತ್ತು ಪಡೆಯಿರಿ ಎಂದು ಸಲಹೆ ನೀಡಿದರು. ಮರಗಿಡಗಳನ್ನು ನೆಟ್ಟು ಸೆಲ್ಫಿ ತೆಗೆದುಕೊಳ್ಳುವುದಕ್ಕಿಂತ ಕಾಡಿನ ರಕ್ಷಣೆ ನಮ್ಮೆಲ್ಲರ ಹೊಣೆಯಾಗಬೇಕು ಎಂದು ದಾಸ ಪರಿಸರ ಸಂದೇಶ ಸಾರಿದರು.

ಮೈಸೂರಿನ ಚಾಮರಾಜೇಂದ್ರ ಮೃಗಾಲಯಕ್ಕೆ ಭೇಟಿ ನೀಡಿದ ನಟ ದೇವಾರಜ್ ಕುಟುಂಬ ಚಿರತೆ, ಹಾಸ್ಯ ನಟ ಕೀರ್ತಿ ಮೊಸಳೆ, ದರ್ಶನ್ ಮತ್ತು ಸೃಜನ್​  ಲೋಕೇಶ್ ರಿಂದ ಜಿರಾಫೆ ಮರಿ ದತ್ತು ಪಡೆಯಲಾಯಿತು. ಜಿರಾಫೆ ಮರಿಗೆ ತೂಗುಲೋಕ್ ಎಂದು ನಾಮಕರಣ ಮಾಡಲಾಯಿತು.ಇನ್ನ ಈ ಹಿಂದೆ ಇಬ್ಬರು ಸೇರಿ ದತ್ತು ಪಡೆದ ಹುಲಿಗಳು ನಮ್ಮಂತೆಯೆ ಜೊತೆಯಾಗಿ ನಡೆಯುತ್ತಿವೆ. ಮೃಗಾಲಯದಲ್ಲಿ ಹುಲಿಗಳ ವಿಹಾರ ಕಂಡು ಸಂತೋಷವಾಗಿದೆ ಎಂದು ನಟ ಸೃಜನ್ ತಿಳಿಸಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com