Cricket : ಭಾರತ vs ಪಾಕಿಸ್ತಾನ : ಸಾಂಪ್ರದಾಯಿಕ ಎದುರಾಳಿಗಳ ನಡುವೆ ಸೂಪರ್ – 4 ಫೈಟ್

ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ರವಿವಾರ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವೆ ಏಷ್ಯಾಕಪ್ ಟೂರ್ನಿಯ ಸೂಪರ್ – 4 ಹಂತದ ಪಂದ್ಯ ನಡೆಯಲಿದೆ. ಲೀಗ್ ಪಂದ್ಯದಲ್ಲಿ ಭಾರತದ ಎದುರಿನ ಸೋಲಿಗೆ ಸರ್ಫರಾಜ್ ಖಾನ್ ಬಳಗ ತಿರುಗೇಟು ನೀಡುವ ಹವಣಿಕೆಯಲ್ಲಿದೆ.

ಪ್ರಸಕ್ತ ಏಷ್ಯಾಕಪ್ ಟೂರ್ನಿಯಲ್ಲಿ ಸತತ ಮೂರು ಮ್ಯಾಚ್ ಜಯಿಸಿರುವ ರೋಹಿತ್ ಶರ್ಮಾ ಬಳಗ ವಿಶ್ವಾಸಲ್ಲಿದೆ. ಕಳೆದ ಪಂದ್ಯದಲ್ಲಿ ಬಾಂಗ್ಲಾದೇಶವನ್ನು 8 ವಿಕೆಟ್ ಗಳಿಂದ ಬಗ್ಗು ಬಡಿದಿರುವ ಭಾರತ ಮತ್ತೊಂದು ಜಯದ ತವಕದಲ್ಲಿದೆ. ಅಫಘಾನಿಸ್ತಾನದ ವಿರುದ್ಧದ ಪಂದ್ಯದಲ್ಲಿ ರೋಚಕ ಗೆಲುವು ಸಾಧಿಸಿರುವ ಪಾಕಿಸ್ತಾನ ಭಾರತದ ಗೆಲುವಿನ ಓಟಕ್ಕೆ ಬ್ರೇಕ್ ಹಾಕಲು ಯತ್ನಿಸಲಿದೆ.

ಗಾಯಗೊಂಡು ಟೂರ್ನಿಯಿಂದ ಹೊರನಡೆದಿರುವ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಬದಲು ಸ್ಥಾನ ಪಡೆದ ರವೀಂದ್ರ ಜಡೇಜಾ ಬಾಂಗ್ಲಾ ಎದುರು ಉತ್ತಮ ಪ್ರದರ್ಶನ ತೋರಿ ತಂಡದ ಬಲ ಹೆಚ್ಚಿಸಿದ್ದಾರೆ. ಕಳೆದ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರಿರುವ ವೇಗಿಗಳಾದ ಭುವನೇಶ್ವರ್ ಕುಮಾರ್ ಹಾಗೂ ಜಸ್ಪ್ರೀತ್ ಬುಮ್ರಾ ಪಾಕ್ ಬ್ಯಾಟ್ಸಮನ್ ಗಳನ್ನು ನಿಯಂತ್ರಿಸಬೇಕಿದೆ.

Leave a Reply

Your email address will not be published.