ನಕ್ಸಲರ ಗುಂಡಿನ ದಾಳಿಗೆ ಬಲಿಯಾದ ಡಿಟಿಪಿ ಮಾಜಿ, ಹಾಲಿ ಶಾಸಕರು..!

ಹೈದರಬಾದ್​ : ತೆಲಗು ದೇಶಂ ಪಕ್ಷದ  ಶಾಸಕ ಕಿದರಿ ಸರ್ವೇಶ್ವರ ರಾವ್ ಹಾಗೂ ಮಾಜಿ ಶಾಸಕ ಶಿವಾರಿ ಸೋಮಾ ಅವರನ್ನು ಇಂದು ನಕ್ಸಲರು ಗುಂಡಿಕ್ಕಿ ಕೊಂದಿರುವ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣಂದಲ್ಲಿ ನಡೆದಿದೆ.

ಇಂದು ಬೆಳಗ್ಗೆ ವಿಶಾಕಪಟ್ಟಣದ ಅರಕು ಕಣಿವೆಯ ಪ್ರದೇಶದ ದುಂಬ್ರಿಗುಡ ಮಂಡಲದಿಂದ ಪಕ್ಷದ ಕಾರ್ಯಕ್ರಮ ಮುಗಿಸಿಕೊಂಡು ಮರಳಿ ಬರುತ್ತಿದ್ದಾಗ ನಕ್ಸಲರು ದಾಳಿ ನಡೆಸಿ ಶಾಸಕರನ್ನು ಕೊಂದಿದ್ದಾರೆ.   ಸರ್ವೇಶ್ವರ ಹಾಗೂ ಶಿವಾರಿ ಸೋಮಾ ಅವರು ಪ್ರಯಾಣಿಸುತ್ತಿದ್ದ ಕಾರನ್ನು ತಡೆದ ನಕ್ಸಲರು, ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಗುಂಡಿನ ಮಳೆ ಸುರಿಸಿದ್ದಾರೆ. ಪರಿಣಾಮ ಕಾರಿನಲ್ಲಿದ್ದ ಶಾಸಕರು ಮೃತಪಟ್ಟಿದ್ದಾರೆ.

Leave a Reply

Your email address will not be published.