ಡಿ ಬಾಸ್​​ಗಾಗಿ ಸಿನಿಮಾ ಮಾಡ್ತಾರಾ ತೆಲುಗಿನ ಸ್ಟಾರ್​ ಡೈರೆಕ್ಟರ್ : ದಚ್ಚುನ ಭೇಟಿ ಮಾಡಿದ ಸುಕುಮಾರ್​

ಬೆಂಗಳೂರು : ತೆಲುಗಿನ ಸ್ಟಾರ್​ ಡೈರೆಕ್ಟರ್​ ಸುಕುಮಾರ್​ ಚಾಲೆಂಜಿಂಗ್​ ಸ್ಟಾರ್​ನ  ಭೇಟಿ ಮಾಡಿದ್ದು ಭಾರೀ ಕುತೂಹಲ ಮೂಡಿಸಿದೆ. ಇಬ್ಬರು ಭೇಟಿಯಾಗಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಅಗಿದೆ.

ಸುಕುಮಾರ್ ಅವರು ತೆಲುಗು ಚಿತ್ರರಂಗದಲ್ಲಿ ಬ್ಲಾಕ್ ಬಸ್ಟರ್ ಸಿನಿಮಾಗಳನ್ನ ನಿರ್ದೇಶನ ಮಾಡಿದ್ದಾರೆ. ಇವರು ಸೂರಜ್ ಗೌಡ ಅಭಿನಯದ ‘ಲಕ್ಷ್ಮಿತನಯ’ ಚಿತ್ರದ ಮುಹೂರ್ತಕ್ಕೆ ಅತಿಥಿಯಾಗಿ ಬಂದಿದ್ದರು. ಇದೇ ವೇಳೆ ಡಾ. ರಾಜ್ ಕುಮಾರ್ ಸಮಾಧಿಗೆ ಭೇಟಿ ನೀಡಿ ಗೌರವ ಸಲ್ಲಿಸಿದ್ದರು.ಇದಾದ ನಂತ ದರ್ಶನರನ್ನ ಭೇಟಿ ಮಾಡಿದ್ದಾರೆ. ದರ್ಶನ್​ ತೆಲುಗು ಸಿನಿಮಾ ಮಾಡತ್ತಾರ, ಅಥವಾ ತೆಲುಗಿನ ಸ್ಟಾರ್​ ಡೈರೆಕ್ಟರ್ ಕನ್ನಡಕ್ಕೆ ಬಂದು ಸಿನಿಮಾ ಮಾಡುತ್ತಾರ ಎಂದು ಗಾಂಧಿನಗರದಲ್ಲಿ ಗುಸು ಗುಸು ಪಿಸು ಪಿಸು ಕೇಳುಸುತ್ತಿದೆ. ​

ಸುಕುಮಾರ್ ಮತ್ತು ದರ್ಶನ್ ಭೇಟಿಯಾಗಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸಖತ್​ ವೈರಲ್ ಆಗಿವೆ. ಅಭಿಮಾನಿಗಳು ತಮ್ಮ ಟ್ವಿಟ್ಟರ್ ನಲ್ಲಿ ಇಬ್ಬರ ಭೇಟಿಯ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಸಿನಿಮಾದ ಮುಹೂರ್ತದ ವೇಳೆ ಮಾತನಾಡಿದ್ದ ಸುಕುಮಾರ್ ಅವರು, “ನನಗೆ ಅವಕಾಶ ಸಿಕ್ಕರೇ ಖಂಡಿತವಾಗಿ ಕನ್ನಡದಲ್ಲಿ ಸಿನಿಮಾ ಮಾಡುತ್ತೀನಿ, ನನ್ನ ಜೀವನದಲ್ಲಿ ಒಂದು ಕನ್ನಡ ಸಿನಿಮಾವನ್ನು ಮಾಡೇ ಮಾಡುತ್ತೀನಿ. ಕನ್ನಡದಲ್ಲಿ ಸಿನಿಮಾ ಮಾಡಬೇಕೆಂಬ ಆಸೆ ನನಗೂ ಇದೆ” ಎಂದು ತಮ್ಮ ಆಶಯವನ್ನು ಹಂಚಿಕೊಂಡಿದ್ದರು. ಆದರೆ ಈ ಮಾತುಗಳೇ ದರ್ಶನ್​ ಭೇಟಿಗೆ ಕಾರಣನ ಎಂದು ಕಾದುನೋಡಬೇಕಿದೆ.

ಇನ್ನ ಸುಕುಮಾರ ತೆಲುಗಿನಲ್ಲಿ ಸಾಲು ಸಾಲು ಹಿಟ್​ ಕೋಟ್ಟು ಸ್ಟಾರ್​ ಡೈರೆಕ್ಟರ್​ ಪಟ್ಟಕ್ಕೇರಿದವರು, ಇವರ ಸಿನಿಮಾ  ಆರ್ಯ, ಆರ್ಯ-2, 100% ಲವ್​ ರಂಗಸ್ಥಲಂ ಇನ್ನು ಮುಂತಾದ ಬ್ಲಾಕ್​ ಬಸ್ಟರ್​ ಚಿತ್ರಗಳನ್ನು ನೀಡಿದ್ದಾರೆ.

Leave a Reply

Your email address will not be published.