ನನಗೆ ಕುರ್ಚಿ ಹೋಗುತ್ತೆಂದು ಭಯವಿಲ್ಲ, ಬಿಎಸ್​ವೈಗೆ ಒಳ್ಳೆ ಬುದ್ದಿ ನೀಡಲೆಂದು ಬೇಡಿಕೊಂಡೆ : ಸಿಎಂ ಟಾಂಗ್​

ಚಿಕ್ಕಮಗಳೂರು : ನನಗೆ ಮಂತ್ರಿ ಕುರ್ಚಿ ಹೋಗುತ್ತೆ ಅಂತಾ ಭಯವಿಲ್ಲ. ಬಿಎಸ್ ಯಡಿಯೂರಪ್ಪಗೆ ಒಳ್ಳೆಯದಾಗಲಿ. ತಾಯಿ ಶಾರದಾಂಬೆ ಅವರಿಗೆ ಒಳ್ಳೆಯ ಬುದ್ದಿ ನೀಡಲಿ ಎಂದು ಬೇಡಿಕೊಂಡೆ ಎಂದು ಸಿಎಂ ಹೆಚ್.ಡಿ ಕುಮಾರಸ್ವಾಮಿ ತಿಳಿಸಿದರು.

ಶೃಂಗೇರಿಯ ಶಾರದಾಂಬೆ ಸನ್ನಿಧಿಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಗೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕುಟುಂಬದವರು ವಿವಿಧ ಹೋಮ, ಹವನಗಳನ್ನು ನೆರವೇರಿಸಿದರು. ಶಾರದಾಂಬೆಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಚಂದ್ರಶೇಖರ ಭಾರತೀ ಸಭಾಂಗಣದಲ್ಲಿ ಮೊದಲಿಗೆ ಗಣಪತಿ ಹೋಮ, ಮೃತ್ಯುಂಜಯ ರುದ್ರಹೋಮ, ನಂತರ ಪ್ರತಿಕ್ರಿಯಾ ಶಾಲಿನಿ ಹೋಮ ನೆರವೇರಿಸಲಾಯಿತು. ಸಂಕಷ್ಟ ನಿವಾರಣೆಗಾಗಿ ಇಂದು ಶೃಂಗೇರಿಯಲ್ಲಿ ವಿವಿಧ ಹೋಮ-ಹವನಗಳನ್ನು ಗೌಡರ ಕುಟುಂಬದವರು ನೆರವೇರಿಸಿದ್ದಾರೆ.

ಇನ್ನ ಸಿಎಂ ಅಧಿಕಾರ ಉಳಿಸಿಕೊಳ್ಳಲು ಟೆಂಪಲ್​ ರನ್​ ಮಾಡುತ್ತಿದ್ದಾರೆ ಎಂಬ ಹೇಳಿಕೆಗೆ ಸಿಎಂ ಟಾಂಗ್​ ನೀಡಿದ್ದು, ಶಾರದಾಂಬೆಯ ದರ್ಶನ ಪಡೆದ ಬಳಿಕ ಮಾತನಾಡಿದ ಸಿಎಂ ಹೆಚ್.ಡಿ ಕುಮಾರಸ್ವಾಮಿ, ‘ನನಗೆ ಮಂತ್ರಿ ಕುರ್ಚಿ ಹೋಗುತ್ತೆ ಅಂತಾ ಭಯವಿಲ್ಲ. ಮಂತ್ರಿ ಕುರ್ಚಿ ಯಾವತ್ತು ಎಂದಿಗೂ ಶಾಶ್ವತ ಅಲ್ಲ. ಬಿಎಸ್ ಯಡಿಯೂರಪ್ಪಗೆ ಒಳ್ಳೆಯದಾಗಲಿ. ತಾಯಿ ಶಾರದಾಂಬೆ ಅವರಿಗೆ ಒಳ್ಳೆಯ ಬುದ್ದಿ ನೀಡಲಿ ಎಂದು ಸಿಎಂ ಹೆಚ್.ಡಿ ಕುಮಾರಸ್ವಾಮಿ ಹಾರೈಸಿದರು.

 

Leave a Reply

Your email address will not be published.