ಕೊಪ್ಪಳ : ಕಿಡಿಗೇಡಿಗಳಿಂದ ವಾಲ್ಮೀಕಿ ಮೂರ್ತಿ ಭಗ್ನ : ಗ್ರಾಮಸ್ಥರಿಂದ ರಸ್ತೆ ತಡೆದು ಪ್ರತಿಭಟನೆ..!

ಕೊಪ್ಪಳ :  ಕಿಡಿಗೇಡಿಗಳಿಂದ ವಾಲ್ಮೀಕಿ ಮಹರ್ಷಿಯ ಮೂರ್ತಿಯನ್ನು ಕಲ್ಲಿನಿಂದ  ಭಗ್ನಗೊಳಿಸಿರುವ ಘಟನೆ ಕೊಪ್ಪಳದ ಕನಕಗಿರಿ ತಾಲೂಕಿನ ಹುಲಿಹೈದರ್ ಗ್ರಾಮದಲ್ಲಿ ನಡೆದಿದೆ.

ಕೊಪ್ಪಳದ ಹೆದ್ದಾರಿಯಲ್ಲಿರುವ ವಾಲ್ಮಿಕಿ ಮಹರ್ಷಿಯ ಮೂರ್ತಿಯನ್ನು ಕಿಡಿಗೇಡಿಗಳು ಭಗ್ನಗೊಳಿಸಿದ್ದು, ಈ ಘಟನೆಯನ್ನು ಖಂಡಿಸಿ ವಾಲ್ಮೀಕಿ ಸಮುದಾಯದವರು ರಾಜ್ಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸುತ್ತಿದ್ದಾರೆ.  ಗಂಗಾವತಿ – ತಾವರಗೇರಾ ರಸ್ತೆ ತಡೆದು  ನೂರಾರು ಜನರು ರಸ್ತೆ ತಡೆದು ಪ್ರತಿಭಟನೆ  ನಡೆಸುತ್ತಿದ್ದು, ಸ್ಥಳದಲ್ಲಿ ಉದ್ವಿಗ್ನ ವಾತಾವರಣ ಏರ್ಪಟ್ಟಿದ್ದು ಸ್ಥಳಕ್ಕೆ ಕನಕಗಿರಿ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com