ಮದ್ಯ ಮಾರುತ್ತಿದ್ದ ಮಹಿಳೆಯರ ನಡುವೆ ಮಾರಾಮಾರಿ : ಸ್ಥಳದಲ್ಲಿದ್ದರೂ ಮೂಕರಂತೆ ನಿಂತ ಪೊಲೀಸರು

ವಿಜಯಪುರ : ಅಕ್ರಮ ಮದ್ಯ ಮಾರಾಟ ವಿಚಾರವಾಗಿ ಮಹಿಳೆಯರು ಪರಸ್ಪರ ಬಟ್ಟೆ ಹರೆದುಕೊಂಡು ಬಡೆದಾಡಿಕೊಂಡ ಘಟನೆ ವಿಜಯಪುರದಲ್ಲಿ ನಡೆದಿದೆ.

ಬ್ಯಾಟರ ಗಲ್ಲಿಯಲ್ಲಿ ಅಕ್ರಮವಾಗಿ ಮಹಿಳೆಯರೇ ಮದ್ಯ ಮಾರಾಟ ಮಾಡುತ್ತಿದ್ದರು. ಗಣೇಶ ವಿಸರ್ಜನೆ ಹಾಗೂ ಮೊಹರಂ ಪ್ರಯುಕ್ತ ಜಿಲ್ಲೆಯಲ್ಲಿ ಮದ್ಯ‌ ಮಾರಾಟ ನಿಷೇಧಿಸಲಾಗಿತ್ತು. ಆದ್ರೆ ಸೋಲ್ಹಾಪುರ ರಸ್ತೆಯ ಬ್ಯಾಟರ ಗಲ್ಲಿಯಲ್ಲಿ ಎಗ್ಗಿಲ್ಲದೇ ಹಾಡಹಗಲೇ ಮದ್ಯ ಮಾರಾಟ ಮಾಡಲಾಗುತ್ತಿತ್ತು. ಇಲ್ಲಿರೊ ಬಹುತೇಕ ಮನೆಗಳಲ್ಲಿ ಮದ್ಯ ಮಾರಾಟವನ್ನು ಕುರ್ಚಿ ಟೇಬಲ್ ಹಾಕುವ ಮೂಲಕ ವ್ಯವಸ್ಥಿತವಾಗಿ ಮಹಿಳೆಯರೇ ಮಾರಾಟ ಮಾಡುತ್ತಿದ್ದರು.

ಆದ್ರೆ ಇಲ್ಲಿಗೆ ಬರುವ ಮದ್ಯ ಪ್ರಿಯರು ನಮ್ಮಲ್ಲೇ ಬರಬೇಕೆಂಬ ದುರುದ್ದೇಶದಿಂದ ಗ್ರಾಹಕರನ್ನು ಸೆಳೆಯುವ ಭರದಲ್ಲಿ ಗಲಾಟೆ  ಎದ್ದಿದ್ದು, ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ.  ಗಲಾಟೆ ಅದೆಷ್ಟು ವಿಕೋಪಕ್ಕೆ ತಿರುಗಿತ್ತೆಂದ್ರೆ ಮಹಿಳೆಯರು ಪರಸ್ಪರ ಬಟ್ಟೆ ಹರಿದುಕೊಂಡು ಬಡೆದಾಡಿಕೊಂಡಿದ್ದಾರೆ. ಪೊಲೀಸರು ಎದುರೇ ಈ ಘಟನೆ ನಡೆದ್ರೂ ಪೊಲೀಸರು ಮಾತ್ರ ಮೂಕ ಪ್ರೇಕ್ಷಕ್ರಂತೆ ನಿಂತಿದ್ದು ದುರಂತದ ಸಂಗತಿ.  ಸಾರ್ವಜನಿಕವಾಗಿ ಸಾಕಷ್ಟು ಆಕ್ರೋಶಕ್ಕೆ‌ ಎಡೆ ಮಾಡಿಕೊಟ್ಟಿದೆ.

ಅಷ್ಟಕ್ಕೆ ನಿಲ್ಲದ ಗಲಾಟೆ, ಪರಸ್ಪರ ಕಲ್ಲು‌ ತೂರಾಟ ಮಾಡಿದ್ದಾರೆ. ಕುಡಿಯಲು ಇಟ್ಟಿದ್ದ ಕುರ್ಚಿ ಟೇವಲ್ ಗಳನ್ನು ಎಸೆದಾಡಿ ದಾಂಧಲೆ‌ ನಡೆಸಿದ್ದಾರೆ. ಈ ಮಹಿಳೆಯರ ಜಗಳವನ್ನು ಬಿಡಿಸಲು ಅವರವರ ಗಂಡಂದಿರು ಹಾಗೂ ಪೊಲೀಸರು ಹರಸಾಹಸ‌ ಪಟ್ಟರು. ಈ ಘಟನೆಗೆ ಸಂಬಂಧ ಆದರ್ಶನಗರ ಪೊಲೀಸ್ ಠಾಣೆ  ವ್ಯಾಪ್ತಿಯಲ್ಲಿ  ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

Leave a Reply

Your email address will not be published.

Social Media Auto Publish Powered By : XYZScripts.com