ಕ್ರಿಕೆಟ್​ ಬಿಟ್ಟು ಚಿತ್ರರಂಗಕ್ಕೆ ಎಂಟ್ರಿ ಕೊಡ್ತಾರಾ ವಿರಾಟ್​ : ಕೊಹ್ಲಿ ಪೋಸ್ಟರ್​ಗೆ ಅಭಿಮಾನಿಗಳು ಫಿದಾ..!

ನವದೆಹಲಿ : ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸದ್ಯ ಕ್ರಿಕೆಟ್ ದಾಖಲೆಗಳ ಸರದಾರನಾಗಿ ಮಿಂಚುತ್ತಿದ್ದಾರೆ. ಈ ಮಧ್ಯೆ ಕೊಹ್ಲಿಯ  ಪೋಸ್ಟರ್ ಒಂದು ಬಿಡುಗಡೆಯಾಗಿದ್ದು ಕೊಹ್ಲಿ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ.

ಭಾರತೀಯ ಕ್ರಿಕೆಟರ್​ ವಿರಾಟ್ ಕೊಹ್ಲಿ ತಮ್ಮ ಟ್ವೀಟರ್ ಖಾತೆಯಲ್ಲಿ ಪೋಸ್ಟರ್ ವೊಂದನ್ನು ಹಂಚಿಕೊಂಡಿದ್ದು ಕೊಹ್ಲಿ ಬಾಲಿವುಡ್​ಗೆ ಎಂಟ್ರಿ ಕೊಡುತ್ತಿದ್ದಾರೆಯೇ? ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿಸಿದೆ. ಇನ್ನು ಪೋಸ್ಟರ್ ನಲ್ಲಿ ವಿರಾಟ್ ಕೊಹ್ಲಿ ಸೂಪರ್ ಹೀರೋ ರೀತಿ ಕಾಣಿಸಿಕೊಂಡಿದ್ದು ಅಭಿಮಾನಿಗಳಿಗೆ ಸರ್ ಪ್ರೈಸ್ ನೀಡಿದ್ದಾರೆ.

ಇದು ಸಿನಿಮಾ ಪೋಸ್ಟರ್​, ಯಾವುದಾದರೂ ಜಾಹೀರಾತು ಅಥವಾ ಕಿರುಚಿತ್ರಕ್ಕೆ ಸಂಬಂಧಿಸಿದ್ದಾ ಎಂಬ ಬಗ್ಗೆ ಸ್ಪಷ್ಟನೆ ಇಲ್ಲ. ಕೊಹ್ಲಿ ಸಿನಿಮಾ ಮಾಡುತ್ತಿದ್ದಾರ ಅಥವಾ  ಜಾಹೀರಾತಿನ  ಪೋಸ್ಟರ್​ ಅನ್ನೊದನ್ನ ತಿಳಿಯಬೇಕಾದರೇ ಸೆಪ್ಟೆಂಬರ್ 28ರವರೆಗೆ ಕಾಯಬೇಕು. ಏಕೆಂದರೆ ಈ ಪೋಸ್ಟರ್​ನ ಟ್ರೀಲರ್​ ರಿಲೀಸ್ ಆಗುತ್ತಿದ್ದು ವಿರಾಟ್ ಕೊಹ್ಲಿಯ ಮತ್ತೊಂದು ಮುಖ ಅನಾವರಣ ಆಗಲಿದೆ.

Leave a Reply

Your email address will not be published.