‘ಯಾವುದೇ ಕಾರಣಕ್ಕೂ ನಮ್ಮ ಶಾಸಕರು ಬೇರೆ ಪಕ್ಷಕ್ಕೆ ಹೋಗುವುದಿಲ್ಲ’ : ಡಿಸಿಎಂ ಪರಮೇಶ್ವರ್​

ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ.ಯಾವುದೇ ಕಾರಣಕ್ಕೂ ಶಾಸಕರು ಬೇರೆ ಪಕ್ಷಕ್ಕೆ ಹೋಗುವುದಿಲ್ಲ ಎಂದು ರಾಜ್ಯದ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

ಉತ್ತರಕನ್ನಡ ಜಿಲ್ಲೆಯ ಕಾರವಾರದ ಗೋವಾ ಗಡಿಯಲ್ಲಿ ಈ ಸಂಬಂಧ ಹೇಳಿಕೆ ನೀಡಿದ ಪರಮೇಶ್ವರ್ ಪಕ್ಷದ ಯಾವ ಶಾಸಕರು ರೆಸಾರ್ಟ್ ನತ್ತ ಹೋಗುತ್ತಿಲ್ಲ.ಒಂದಿಬ್ಬರು ಅವರ ಖಾಸಗಿ ಜೀವನಕ್ಕಾಗಿ ಹೋಗಿದ್ದರೆ ಅದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ ಎಂದು ಪರಮೇಶ್ವರ್ ಹೇಳಿದ್ದಾರೆ.ಇನ್ನು ಬಿಜೆಪಿಗರು ಅಪರೇಷನ್ ಕಮಲ ಮಾಡಿ ಸರ್ಕಾರ ರಚನೆ ಮಾಡೋ ಪ್ರಯತ್ನ ಮಾಡಿ ವಿಫಲವಾಗಿದ್ದಾರೆ. ಸರ್ಕಾರ ಬೀಳಿಸುವ ಬಿಜೆಪಿ ಕನಸು ಯಾವುದೇ ಕಾರಣಕ್ಕೂ ನನಸಾಗುವುದಿಲ್ಲ ಎಂದು ತಿಳಿಸಿದ್ರು.

ಮುಖ್ಯಮಂತ್ರಿ ದಂಗೆ ಅನ್ನುವ ಪದ ಬಳಕೆ ಮಾಡಿರುವುದಕ್ಕೆ ವಿಶೇಷ ಅರ್ಥ ಕಲ್ಪಿಸುವುದು ಬೇಡ.ಅವರು ಯಾವ ಸಂಧರ್ಭದಲ್ಲಿ ಪದ ಬಳಕೆ ಮಾಡಿದ್ದಾರೆನ್ನುವುದು ನೋಡಲಿ ಎಂದು ಸಿಎಂ ಕುಮಾರಸ್ವಾಮಿ ಹೇಳಿಕೆ ಸಮರ್ಥಿಸಿಕೊಂಡ ಪರಮೇಶ್ವರ್ ಸಚಿವ ಸಂಪುಟ ವಿಸ್ತರಣೆ ಶೀಘ್ರದಲ್ಲಿ ನಡೆಯಲಿದೆ. ವಿಧಾನ ಪರಿಷತ್ ಚುನಾವಣೆ ಮುಂದಿನ ತಿಂಗಳು ನಡೆಯಲಿದೆ. ಅದೇ ಸಂಧರ್ಭದಲ್ಲಿ ಖಾತೆ ಬದಲಾವಣೆಯನ್ನ ಸಹ ಮಾಡಲಾಗುವುದು ಎಂದು ಪರಮೇಶ್ವರ್ ಹೇಳಿದ್ದಾರೆ. ಱತಾನು ದೇವಸ್ಥಾನಕ್ಕೆ ಭೇಟಿ ನೀಡಿರುವುದರಲ್ಲಿ ವಿಶೇಷ ವೇನಿಲ್ಲ.ಸಾಮಾನ್ಯವಾಗಿ ದೇವರ ದರ್ಶನಕ್ಕಾಗಿ ಆಗಮಿಸಿ ದ್ದೇನೆಂದು ಪರಮೇಶ್ವರ್ ಈ ಸಂಧರ್ಭದಲ್ಲಿ ಹೇಳಿದರು.

2 thoughts on “‘ಯಾವುದೇ ಕಾರಣಕ್ಕೂ ನಮ್ಮ ಶಾಸಕರು ಬೇರೆ ಪಕ್ಷಕ್ಕೆ ಹೋಗುವುದಿಲ್ಲ’ : ಡಿಸಿಎಂ ಪರಮೇಶ್ವರ್​

Leave a Reply

Your email address will not be published.