ದೋಸ್ತಿ ಸರ್ಕಾರಕ್ಕೆ ಮತ್ತೊಂದು ತಲೆ ನೋವು : ಪ್ರಿಯಾಂಕ್​ ಖರ್ಗೆಯಿಂದ ರಾಜೀನಾಮೆ ಸಾಧ್ಯತೆ?

ಸಚಿವ ಸಂಪುಟ ಸಭೆಯಲ್ಲಿ ಬಡ್ತಿ ಮೀಸಲಾತಿ ವಿವಾದವನ್ನು ಪ್ರಸ್ತಾಪಿಸಿದ ಪ್ರಿಯಾಂಕ್ ಖರ್ಗೆ, ‘ಅನಗತ್ಯವಾಗಿ ಬಡ್ತಿ ಮೀಸಲು ಕಾಯ್ದೆ ಅನುಷ್ಠಾನಕ್ಕೆ ತರಲು ತಡವಾಗುತ್ತಿದೆ. ನಮ್ಮ ಮೇಲೆ ಭರವಸೆ ಇಟ್ಟುಕೊಂಡು ಬಂದಿರುವ ದೀನ ದಲಿತ ವರ್ಗದ ಹಿತ ಕಾಪಾಡಲು ಸಚಿವನಾಗಿ ಸಾಧ್ಯವಾಗಲಿಲ್ಲ ವೆಂದರೆ ಅಧಿಕಾರದಲ್ಲಿ ಏಕಿರಬೇಕು..? ಬಡ್ತಿ ಮೀಸಲು ಕಾಯ್ದೆ ಜಾರಿಗೆ ತರದ ಈ ಸರ್ಕಾರದಲ್ಲಿ ನನಗೆ ಅಧಿಕಾರವೇ ಬೇಡ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆಂದು’ ಸಿಎಂ, ಡಿಸಿಎಂಗೆ ಸಂಪುಟ ಸಭೆಯಲ್ಲಿ ತಿಳಿಸಿದ್ದರು.

ಇದರಿಂದ ಗಲಿಬಿಲಿಗೊಂಡ ಸಿಎಂ ಕುಮಾರಸ್ವಾಮಿ ಹಾಗೂ ಡಿಸಿಎಂ ಪರಮೇಶ್ವರ್ ಅವರು ಸಚಿವ ಖರ್ಗೆ ಅವರನ್ನು ಸಮಾಧಾನಪಡಿಸಿ ಆದಷ್ಟು ಬೇಗ ಕಾಯ್ದೆ ಜಾರಿಗೆ ತರುವ ಭರವಸೆ ನೀಡಿದರೆಂದು ತಿಳಿದುಬಂದಿದೆ.

Leave a Reply

Your email address will not be published.