ಯಾದಗಿರಿ : ಭೀಮಾನದಿಯ ಬ್ರಿಡ್ಜ್ ಕೆಳಗೆ ನವಜಾತ ಶಿಶುವನ್ನು ಬಿಸಾಕಿ ಹೋದ ಪೋಷಕರು..!

ಇಂದು ಬೆಳಗಿನ ಜಾವದಲ್ಲಿ ಹೆರಿಗೆ ಆಗಿದ್ದ ನವಜಾತ ಶಿಶುವನ್ನು ಭೀಮಾನದಿ ದಂಡೆಯಲ್ಲಿ ಇರುವ ಬ್ರಿಡ್ಜ್ ಕೆಳಗೆ ಬಿಸಾಕಿ ಹೋಗಿರುವ ಘಟನೆ ಇಂದು ಬೆಳಿಗ್ಗೆ ಯಾದಗಿರಿ ನಗರದಲ್ಲಿ ಕಂಡು ಬಂದಿದೆ. ನಗರದ ಭೀಮಾನದಿ ಪಕ್ಕದಲ್ಲಿ ಪತ್ತೆ ಯಾದ ನವಜಾತ ಶಿಸು ಒಂದು ದಿನದ ಗಂಡು ಶಿಶು ಇದಾಗಿದ್ದು, ಮಗು ಬೇಡವಾದ ಹಿನ್ನೆಲೆಯಲ್ಲಿ ಈ ರೀತಿ ಬಟ್ಟೆಯಲ್ಲಿ ಸುತ್ತಿ ಬಿಸಾಕಿ ಹೋಗಿದ್ದಾರೆ ಎನ್ನಲಾಗಿದೆ.

ಸ್ಥಳೀಯರು ನದಿಗೆ ಕಡೆ ತೆರಳುವ ವೇಳೆ ನವಜಾತ ಶಿಶು ಕಂಡುಬಂದಿದೆ, ಕೂಡಲೇ ಮಕ್ಕಳ ರಕ್ಷಣಾ ಘಟಕ ಅಧಿಕಾರಿಗಳಿಗೆ ಮಾಹಿತಿ ನೀಡಿ ಮಗುವನ್ನು ರಕ್ಷಣೆ ಮಾಡಿದ್ದಾರೆ. ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಅಧಿಕಾರಿಗಳು ಮಗುವನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಒಂದು ದಿನದ ಮಗು ಇದಾಗಿದ್ದು, ಯಾರೋ ಪಾಪಿ ಪೋಷಕರು ಮಗು ಬೇಡವಾದ ಹಿನ್ನಲೆ ಹೀಗೆ ಮಗುವನ್ನು ಬಿಸಾಕಿದ್ದಾರೆ.

ಮುದ್ದಾದ ಗಂಡು ಶಿಶು ರಕ್ಷಣೆ ಮಾಡಲಾಗಿದ್ದು, ಮಧ್ಯಾಹ್ನದ ನಂತರ ಮಗುವನ್ನು ಕಲಬುರ್ಗಿ ಶಿಶು ಅಮ್ಯೂಲ್ಯ ಕೇಂದ್ರಕ್ಕೆ ಬಿಡಲಾಗುವುದು ಎಂದಿದ್ದಾರೆ ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಅಬ್ದುಲ್ ರೆಹಮಾನ್. ಅಲ್ಲದೆ ಮಗುವಿನ ಬಗ್ಗೆ ಮಾಹಿತಿ ನೀಡಿದ ಸ್ಥಳೀಯರಿಗೆ ಧನ್ಯವಾದಗಳು ಹೇಳಿದರು. ಇನ್ನೂ ನವಜಾತ ಶಿಶುವನ್ನು ಬಿಸಾಕಿ ಹೋದ ಪಾಪಿಗಳಿಗೆ ಜನರು ಹಿಡಿ ಶಾಪ್ ಹಾಕಿದ್ರು.

Leave a Reply

Your email address will not be published.