ಡಬ್ಬಿಂಗ್ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿರುವ ಬೆಡಗಿ ಶಿಲ್ಪಾ ಭಾಗವತರ್..

ಕಾಲೇಜು ದಿನಗಳಲ್ಲಿ ನಟನೆಯ ಹುಚ್ಚು ಬೆಳೆಸಿಕೊಂಡು ನಟನೆ ಮಾಡುತ್ತಿದ್ದವಳು, ಎಲ್ಲರಿಂದ ಸಿಗುತ್ತಿದ್ದ ಪ್ರೋತ್ಸಾಹದಿಂದ ಉತ್ತಮ ನಟಿಯಾಗಬೇಕೆಂದು ನಟನೆ ಮಾಡಲು ಸುರು ಮಾಡಿದ್ದಳು.ತನ್ನಲ್ಲಿರುವ ನಟನಾ ಕೌಶಲ್ಯದಿಂದ ಸಿಕ್ಕ ಅವಕಾಶಗಳನ್ನ ಬಳಸಿಕೊಂಡು ನಟನೆಯಲ್ಲಿ ಮೋಡಿ ಮಾಡಿ ಎಲ್ಲರಿಂದ ಸೈ ಅನಿಸಿಕೊಂಡವಳು. ಆದ್ರೆ ನಟನೆಯ ಜತೆಗೆ ಹವ್ಯಾಸಕ್ಕಾಗಿ ಸುರು ಮಾಡಿದ್ದು ಮಾತ್ರ ಕಂಠದಾನ. ಬರು ಬರುತ್ತಾ ನಟನೆಗೆ ಫುಲ್ ಸ್ಟಾಪ್ ಇಟ್ಟ ಈಕೆ, ಡಬ್ಬಿಂಗನ್ನ ಆಯ್ಕೆ ಮಡಿಕೊಂಡು, ಇಂದು ಹಿರಿತೆರೆ, ಕಿರುತೆರೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ತಮ್ಮ ಅದ್ಬುತ ಕಂಠದಾನ ಮಾಡುವ ಮೂಲಕ ಹೆಸರಾಂತ ಡಬ್ಬಿಂಗ್ ಕಲಾವಿದೆಯಾಗಿ ಚಿರಪರಿಚಿತಳಾಗಿದ್ದಾಳೆ. ಅವರು ಮತ್ಯಾರು ಅಲ್ಲ ಸಿಲಿಕಾನ್ ಸಿಟಿಯ ಅಂದದ ಬೆಡಗಿ ಶಿಲ್ಪಾ ಭಾಗವತರ್.

ಪಟಾಪಟ್ ಅಂತ ಮಾತನಾಡುತ್ತ ಮಾತಿನಲ್ಲೇ ಮೋಡಿ ಮಾಡಬಲ್ಲ ಚತುರೆ ಈಕೆ. ಇಂದು ಡಬ್ಬಿಂಗ್ ಕ್ಷೆತ್ರದಲ್ಲಿ ತನ್ನದೆ ಆದ ಛಾಪು ಮೂಡಿಸಿರುವ ಶಿಲ್ಪಾ ಭಾಗವತರ್, ಹುಟ್ಟಿ ಬೆಳೆದದ್ದು ಎಲ್ಲವು ಬೆಂಗಳೂರಿನಲ್ಲಿ. ಕಾಲೇಜು ದಿನಗಳಲ್ಲಿನಟನೆಯ ಹಿಂದೆ ಬಿದ್ದ ಈಕೆ, ನಟಿಯಾಗುವ ಕನಸನ್ನ ಕೈಗೂಡಿಸಿಕೊಳ್ಳಲು ಮೊದಲು ಅಭಿನಯಿಸಿದ್ದು ನಾಟಕಗಳಲ್ಲಿ. ಇಲ್ಲಿಂದ ಶುರುವಾದ ಇವರ ನಟನಾ ವೃತ್ತಿ, ಈ ಟಿವಿ ವಾಹಿನಿಯ ಕ್ಯಾಂಪಸ್ ಚಿಟ್ ಚಾಟ್ ಕಾರ್ಯಕ್ರಮದ ನಿರೂಪಕಿಯಾಗಿ ಎಲ್ಲರ ಮನಗೆದ್ದಿದ್ದ ಶಿಲ್ಪಾ, ಮುಂದೆ ನಿರ್ದೇಶಕ ನಾಗಾಭರಣ ಅವರ ಮಹಾಮಾಯಿ ಧಾರವಾಹಿಯಲ್ಲಿ ಸಿಕ್ಕ ಚಿಕ್ಕ ಪಾತ್ರದಿಂದ ನಟನಾ ಬದುಕಿಗೆ ಶಕ್ತಿ ತುಂಬಿಕೊಡರು.

ಧಾರವಾಹಿಗಳಲ್ಲಿ ಹಾಸ್ಯದ ಪಾತ್ರಗಳಿಂದಲೇ ಹೆಚ್ಚು ಜನಪ್ರಿÃಯವಾಗಿದ್ದ ಶಿಲ್ಪಾ, ತನ್ನನ್ನು ಅರಸುತ್ತಾ ಬಂದ ಸಾಲು ಸಾಲು ಅವಕಾಶಗಳನ್ನ ಸಮರ್ಥವಾಗಿ ಬಳಸಿಕೊಂಡು ನಟನಾ ಕ್ಷೆÃತ್ರದಲ್ಲಿ ಗಟ್ಟಿಯಾಗಿ ತಳವೂರಿದ್ದರು. ವೈಶಾಲಿ ಕಾಸರವಳ್ಳಿಯವರ ಮುತ್ತಿನ ತೋರಣದಲ್ಲಿ ಗ್ಲಾಮರ್ ಆಗಿ ಕಾಣಿಸಿಕೊಂಡು, ಜನಮೆಚ್ಚುಗೆ ಪಡೆದವರು. ಕುಂಕುಮ ಭಾಗ್ಯ, ಕುಸುಮಾಂಜಲಿ ಸೇರಿದಂತೆ ಹಲವು ಸೀರಿಯಲ್ ಗಳಲ್ಲಿ ನಟಸಿದ್ದರು.


ಸಿನಿಮಾ ಸೇರಿದಂತೆ ವಿವಿಧ ಕ್ಷೆÃತ್ರಗಳಲ್ಲಿ ಡಬ್ಬಿಂಗ್ ಇಂದು ಹೆಚ್ಚು ಬೇಡಿಕೆ ಪಡೆದುಕೊಂಡಿದೆ. ಕಲಾವಿದರ ಪಾತ್ರಗಳಿಗೆ ಜೀವ ತುಂಬುವಲ್ಲಿ ಡಬ್ಬಿಂಗ್ ಮಹತ್ತರ ಪಾತ್ರ ನಿರ್ವಹಿಸುತ್ತಿದ್ದು, ಡಬ್ಬಿಂಗ್ ಕಲಾವಿದರಿಗಾಗಿ ಬೇಡಿಕೆ ಸಹ ಹೆಚ್ಚಾಗುತ್ತಿದೆ. ಇಂತಹ ಸಂದರ್ಭದಲ್ಲಿ ಡಬ್ಬಿಂಬ್ ಕ್ಷೆÃತ್ರಕ್ಕೆ ಕಾಲಿಟ್ಟವಳು ಶಿಲ್ಪಾ. ಇಂದು ಹೆಸರಾಂತ ಡಬ್ಬಿಂಗ್ ಕಲಾವಿದರಲ್ಲಿ ಶಿಲ್ಪಾ ಭಾಗವತರ್ ಸಹ ಒಬ್ಬರಾಗಿದ್ದಾರೆ. ನಟನೆ ಮಾಡಲು ಬಂದ ಶೀಲ್ಪಾ ಇಂದು ಡಬ್ಬಿಂಗ್ ಕಲಾವಿದೆಯಾಗಿ ಜನಮಾನಸದಲ್ಲಿ ಗಟ್ಟಿಯಾಗಿ ನಿಂತಿದ್ದಾಳೆ.

ಕೇವಲ ಹವ್ಯಾಸಕ್ಕಾಗಿ ಡಬ್ಬಿಂಗ್ ಮಾಡುತ್ತಿದ್ದ ಶಿಲ್ಪಾ ಇಂದು ನಟನೆ ಬಿಟ್ಟು, ಕೇವಲ ಡಬ್ಬಿಂಗ್ ಮಾಡಿ, ಪಾತ್ರಗಳಿಗೆ ಜೀವ ತುಂಬುವಲ್ಲಿ ಯಶಸ್ವಿಯಾಗಿದ್ದಾರೆ. ಆರಂಭದಲ್ಲಿ ಆಕೆ ನಟಿಸುತ್ತಿದ್ದ ಧಾರವಾಹಿಗಳ ತನ್ನ ಪಾತ್ರಗಳಿಗೆ ಆಕೆಯೆ, ಡಬ್ಬಿಂಗ್ ಮಾಡುತ್ತಿದ್ದಳು.ಈಕೆಯ ಕಂಠದಾನ ಗುರುತಿಸಿದ ಎಲ್ಲರಿಂದ ಹೆಚ್ಚು ಹೆಚ್ಚು ಡಬ್ಬಿಂಗ್ ಮಾಡುವಂತೆ ಪ್ರೊÃತ್ಸಾಹ ದೊರಕಿತು. ಗಂಟೆ ಒಂದು, ಹಾರರ್ ಮೂವಿಯ ಹಿರೋಯಿನ್ ಪಾತ್ರಕ್ಕೆ ಡಬ್ಬಂಗ್ ಮಾಡುವದರಿಂದ ಆರಂಭವಾದ ಡಬ್ಬಿಂಗ್ ಜರ್ನಿ ಅವಳಿಗೆ ಗೊತ್ತಿಲ್ಲದೆ, ತುಂಬ ಎತ್ತರಕ್ಕೆ ಕರೆದುಕೊಂಡು ಹೋಗಿದೆ.

ರಾಗಿಣಿ ದ್ವಿÃವೇದಿ, ಅಂದ್ರಿತಾ ರೈ, ಸೋನು ಗೌಡ, ಫಾರೂಲ್ ಯಾದವ್, ಪೂಜಾ ಗಾಂಧಿ, ಸಂಜನಾ ಸೇರಿದಂತ ಹಲವು ನಟಿಯರಿಗೆ ಕಂಠದಾನ ಮಾಡಿ ಸೈ ಎನಿಸಿಕೊಂಡವಳು. ಅಷ್ಟೆ ಅಲ್ಲದೆ ತಾಲ್ ಸಿನಿಮಾದಲ್ಲಿ ಐಶ್ವರ್ಯ ರೈ, ಐತರಾಜನಲ್ಲಿ ಪ್ರಿÃಯಾಂಕ ಚೋಪ್ರಾ, ನೋ ಎಂಟ್ರಿಯಲ್ಲಿ ಬಿಪಾಶ ಬಸು, ಪುಕಾರ ಸಿನಿಮಾದಲ್ಲಿ ಮಾಧುರಿ ಧೀಕ್ಷಿತ್, ಕರೀನಾ ಕಪೂರ ಸೇರಿದಂತೆ ಹಲವು ಹೆಸರಾಂತ ನಟಿಯರ ಪಾತ್ರಗಳಿಗೆ ಡಬ್ ಮಾಡಿದ ಹಿರಿಮೆ ಶಿಲ್ಪಾ ಭಾಗವತರದ್ದು.

೮೦೦ ಕ್ಕೂ ಹೆಚ್ಚೂ ಮೂವಿಗಳು, ೧೦೦೦ಕ್ಕು ಅಧಿಕ ಜಾಹಿರಾತು, ಡಾಕ್ಯುಮೆಂಟರಿ, ಕಾರ್ಟೂನವಾಯ್ಸ್, ಇ-ಲರ್ನಿಂಗ್, ಧಾರವಾಹಿಗಳಿಗೆ ಡಬ್ಬಿಂಗ್ ಮಾಡಿದ ಹಿರಿಮೆ ಈಕೆಯದ್ದು. ೬೦ ಕ್ಕು ಹೆಚ್ಚು ಧಾರವಾಗಿಗಳಲ್ಲಿ ನಟಿಸಿದ್ದ ಕಲಾವಿದೆ ಇಂದು ಉತ್ತಮ ಡಬ್ಬಿಂಗ್ ಕಲಾವಿದೆಯಾಗಿ ಚಿರಪರಿಚಿತ. ಒಂದು ಸಿನಿಮಾ ಕಲಾವಿದನ ನಟನೆಯಿಂದ ಜೀವ ಪಡೆದುಕೊಳ್ಳುತ್ತೆ ಹಾಗೆಯೆ ಕಲಾವಿದನ ನಟನೆಗೆ ಉಸಿರಾಗುವುದು ಡಬ್ಬಿಂಗ್. ಇವುಗಳಲ್ಲಿ ಯಾವುದಾದರು ಒಂದು ಮಿಸ್ಸಾದ್ರು ಪ್ರೇಕ್ಷಕನಿಗೆ ಇಷ್ಟವಾಗಲ್ಲ. ಅಷ್ಟರ ಮಟ್ಟಿಗೆ ಡಬ್ಬಿಂಗ್ ಮಹತ್ವ ಪಡೆದುಕೊಂಡಿದ್ದು, ಸರಕಾರ, ಚಲನಚಿತ್ರ ಸಂಘ ಸಂಸ್ಥೆಗಳು ಡಬ್ಬಿಂಗ್ ಕಲಾವಿದರ ನೆರವಿಗೆ ಬರಬೇಕಾಗಿದೆ. ಅವರನ್ನ ಗುರುತಿಸಿ ಗೌರವಿಸುವ ಮೂಲಕ ಮತ್ತಷ್ಟು ಪ್ರೋತ್ಸಾಹ ನೀಡುವ ಕೇಲಸ ಆಗಬೇಕು ಎನ್ನುತ್ತಾರೆ ಡಬ್ಬಿಂಗ್ ಕಲಾವಿದೆ ಶಿಲ್ಪಾ ಭಾಗವತರ್.

Leave a Reply

Your email address will not be published.