ಮಂಡ್ಯ : ಅಕ್ರಮ ಮರಳು ಮಾಫಿಯಾ ತಡೆಯಲು ಹೋದ ಮಹಿಳೆಯರ ಕೊಲೆಗೆ ಯತ್ನ..!

ಮಂಡ್ಯ : ಅಕ್ರಮ ಮರಳು ಮಾಫಿಯಾ ತಡೆಯಲು ಹೋದ ಮಹಿಳೆಯ ಮೇಲೆ ಟ್ರಾಕ್ಟರ್ ಹಾಗೂ ಜೆಸಿಬಿ ಡಿಕ್ಕಿ ಹೊಡೆದು ಕೊಲೆ ಮಾಡಲು ಯತ್ನಿಸಿದ ಘಟನೆ ನಾಗಮಂಗಲ ತಾಲ್ಲೂಕಿನ ಕತ್ರಗುಪ್ಪೆ ಗ್ರಾಮದ ಬಳಿ ನಡೆದಿದೆ.

ಕಳೆದ ರಾತ್ರಿ ಗ್ರಾಮಸ್ಥರು ಮಾಫಿಯಾ ತಡೆಯಲು ಹೋದಾಗ ಘಟನೆ ನಡೆದಿದೆ‌. ಘಟನೆಯಲ್ಲಿ ಭಾಗ್ಯಮ್ಮ, ಪುಟ್ಟಮ್ಮ, ಅರಸೇಗೌಡ, ಕಾಳೆಗೌಡ ಎಂಬವರಿಗೆ ಗಾಯವಾಗಿದ್ದು, ಗಾಯಾಳುಗಳಿಗೆ ಆದಿಚುಂಚನಗಿರಿ ಆಸ್ಪತ್ರೆ ಹಾಗೂ ನಾಗಮಂಗಲದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ‌.

ಕಳೆದ ರಾತ್ರಿ ಮರಳು ತೆಗೆಯಲು ಮಾಫಿಯಾದವರು ಬಂದಿದ್ದಾರೆ ಎಂಬ ವಿಚಾರ ತಿಳಿದ ಗ್ರಾಮಸ್ಥರು ಸ್ಥಳಕ್ಕೆ ತೆರಳಿದ್ದಾರೆ. ಆಗ ವಿಚಲಿತಗೊಂಡ ಮಾಫಿಯಾದವರು ಗ್ರಾಮಸ್ಥರ ಮೇಲೆ ಟ್ರಾಕ್ಟರ್ ‌ನಿಂದ ಡಿಕ್ಕಿ ಹೊಡೆಯಲು ಯತ್ನಿಸಿ, ನಂತರ ಜೆಸಿಬಿಯಿಂದ ಡಿಕ್ಕಿ ಹೊಡೆದು ಹಲ್ಲೆ ಮಾಡಿದ್ದಾರೆ.
ವಿಚಾರ ತಿಳಿದ ಬೆಳ್ಳೂರು ಪೊಲೀಸರು ಸ್ಥಳಕ್ಕೆ ಆಗಮಿಸಿ ಟ್ರಾಕ್ಟರ್ ವಶಕ್ಕೆ ಪಡೆದುಕೊಂಡಿದ್ದಾರೆ‌. ಆರೋಪಿಗಳಿಗಾಗಿ ಶೋಧನಾ ಕಾರ್ಯ ಮುಂದುವರಿಸಿದ್ದಾರೆ.

Leave a Reply

Your email address will not be published.