ನಾವ್ಯಾರೂ ಕಾಂಗ್ರೆಸ್-ಜೆಡಿಎಸ್ ಶಾಸಕರ ಖರೀದಿಗೆ ಮುಂದಾಗಿಲ್ಲ : ಪ್ರಹ್ಲಾದ್ ಜೋಶಿ

ಕಲಬುರ್ಗಿ : ‘ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಗೆ ಸುಳ್ಳೇ ಮನೆ ದೇವರು. ಎರಡೂ ಪಕ್ಷಗಳ ಮುಖಂಡರಿಗೆ ಸುಳ್ಳು ಹೇಳುವುದು ಬಿಟ್ಟು ಬೇರೇನು ಗೊತ್ತಿಲ್ಲ ‘ ಎಂದು ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಹೇಳಿಕೆ ನೀಡಿದ್ದಾರೆ.

‘ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರನ್ನು ಬಿಜೆಪಿ ಖರೀದಿಸುತ್ತಿದೆ ಎಂದು ಆರೋಪಿಸಿಸುತ್ತಿದ್ದಾರೆ. ಶಾಸಕರೇನು ಮಾರುಕಟ್ಟೆಯಲ್ಲಿ ಸಿಗುವ ಕೋಳಿಗಳ..? ಇಲ್ಲವೆ ತರಕಾರಿ, ಕಾಯಿ-ಪಲ್ಯೆಯಾ ಖರೀದಿ ಮಾಡಲು..? ನಾವ್ಯಾರು ಶಾಸಕರ ಖರೀದಿಗೆ ಮುಂದಾಗಿಲ್ಲ ‘ ಎಂದಿದ್ದಾರೆ.

‘ ಅವರಾಗಿಯೇ ಆತಿಥ್ಯ ಕೇಳಿಬಂದರೆ ಖಂಡಿತಾ ಆಶ್ರಯ ನೀಡುತ್ತೇವೆ. ಆಶ್ರಯ ಬಯಸಿ ಬಂದೋರಿಗೆ ರಕ್ಷಣೆ ನೀಡೋದು ನಮ್ಮ ಜವಾಬ್ದಾರಿ ‘ ಎಂದು ಪ್ರಹ್ಲಾದ್ ಜೋಶಿ ಹೇಳಿಕೆ ನೀಡಿದ್ದಾರೆ.

Leave a Reply

Your email address will not be published.