Asia Cup : ಇಂದಿನಿಂದ ಸೂಪರ್ – 4 ಕಾದಾಟ : ದುಬೈನಲ್ಲಿ ಭಾರತ – ಬಾಂಗ್ಲಾ ಪಂದ್ಯ

ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರತ ಹಾಗೂ ಬಾಂಗ್ಲಾದೇಶ ತಂಡಗಳ ನಡುವೆ ಶುಕ್ರವಾರ ಸೂಪರ್ – 4 ಹಂತದ ಪಂದ್ಯ ನಡೆಯಲಿದೆ. ಲೀಗ್ ಹಂತದಲ್ಲಿ ಹಾಂಕಾಂಗ್ ಹಾಗೂ ಪಾಕಿಸ್ತಾನ ತಂಡಗಳನ್ನು ಬಗ್ಗುಬಡಿದಿರುವ ಟೀಮ್ ಇಂಡಿಯಾ ಗೆಲುವಿನ ವಿಶ್ವಾಸದಲ್ಲಿದೆ.
ಭುವಿ – ಬುಮ್ರಾ ಬೌಲಿಂಗ್ ಜೋಡಿ ಎದುರಾಳಿ ಬ್ಯಾಟ್ಸಮನ್ ಗಳನ್ನು ಕಟ್ಟಿಹಾಕಬೇಕಿದೆ. ವಿರಾಟ್ ಅನುಪಸ್ಥಿತಿಯಲ್ಲಿ ರಾಯುಡು ಹಾಗೂ ಕಾರ್ತಿಕ್ ಮಧ್ಯಮಕ್ರಮಾಂಕದಲ್ಲಿ ತಂಡಕ್ಕೆ ಆಸರೆಯಾಗಬೇಕಿದೆ.
ಗಾಯಗೊಂಡಿರುವ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಏಷ್ಯಾಕಪ್ ನಲ್ಲಿ ತಂಡಕ್ಕೆ ಅಲಭ್ಯರಾಗಲಿದ್ದು, ಅವರ ಬದಲು ರವೀಂದ್ರ ಜಡೇಜಾಗೆ ಭಾರತ ತಂಡದಲ್ಲಿ ಸ್ಥಾನ ನೀಡಲಾಗಿದೆ.
ಕಳೆದ ಪಂದ್ಯದಲ್ಲಿ ವಿರುದ್ಧ ಅಫಘಾನಿಸ್ತಾನದ ಸೋಲನುಭವಿಸಿರುವ ಮುಷ್ರಫೆ ಮೊರ್ತಾಜಾ ಪಡೆ ಕೊಂಚ ಆಘಾತದಲ್ಲಿದೆ. ಶ್ರೀಲಂಕಾ ವಿರುದ್ಧ ಗೆದ್ದಿದ್ದ ಬಾಂಗ್ಲಾ ಸೂಪರ್ – 4 ಹಂತ ಪ್ರವೇಶಿಸಿತ್ತು.

Leave a Reply

Your email address will not be published.