Cricket : ಬಾಂಗ್ಲಾ ವಿರುದ್ಧ ಅಪಘಾನಿಸ್ತಾನಕ್ಕೆ 136 ರನ್ ಭರ್ಜರಿ ಜಯ – ರಾಶಿದ್ ಆಲ್ರೌಂಡ್ ಆಟ

ಅಬುಧಾಬಿಯ ಶೇಖ್ ಜಾಯೇದ್ ಕ್ರೀಡಾಂಗಣದಲ್ಲಿ ಗುರುವಾರ ನಡೆದ ‘ಬಿ’ ಗುಂಪಿನ ಲೀಗ್ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಅಫಘಾನಿಸ್ತಾನ 136 ರನ್ ಅಂತರದ ಭರ್ಜರಿ ಜಯ ಸಾಧಿಸಿದೆ.

ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಲು ನಿರ್ಧರಿಸಿದ ಅಫಘಾನಿಸ್ತಾನ ನಿಗದಿತ 50 ಓವರುಗಳಲ್ಲಿ 7 ವಿಕೆಟ್ ಕಳೆದುಕೊಂಡು 255 ರನ್ ಮೊತ್ತ ಕಲೆಹಾಕಿತು. ಹಸ್ಮತುಲ್ಲಾಹ್ ಶಾಹಿದಿ 58 ಹಾಗೂ ರಾಶಿದ್ ಖಾನ್ 57 ರನ್ ಬಾರಿಸಿದರು.

ಗುರಿಯನ್ನು ಬೆನ್ನತ್ತಿದ ಬಾಂಗ್ಲಾದೇಶ 42.1 ಓವರ್ ಗಳಲ್ಲಿ 119 ಕ್ಕೆ ಆಲೌಟ್ ಆಯಿತು. ಅಫಘಾನಿಸ್ತಾನ ತಂಡದ ಪರವಾಗಿ ರಾಶಿದ್ ಖಾನ್ ‌ ನಯೀಮ್ ಹಾಗೂ ಮುಜೀಮ್ ಉರ್ ರೆಹಮಾನ್ ತಲಾ 2 ವಿಕೆಟ್ ಪಡೆದರು.

ಬಿ ಗುಂಪಿನಿಂದ ಬಾಂಗ್ಲಾದೇಶ ಹಾಗೂ ಅಫಘಾನಿಸ್ತಾನ ತಂಡಗಳು ಸೂಪರ್ 4 ಹಂತವನ್ನು ಪ್ರವೇಶಿಸಿದ್ದು ಶ್ರೀಲಂಕಾ ಟೂರ್ನಿಯಿಂದ ಹೊರಬಿದ್ದಿದೆ.

Leave a Reply

Your email address will not be published.