ಸಂವಿಧಾನದತ್ತ ಸ್ಥಾನದಲ್ಲಿರುವ ಸಿಎಂ ನಕ್ಸಲ್ ರೀತಿಯಾಗಿ ಹೇಳಿಕೆ ನೀಡಿದ್ದಾರೆ : ಆರ್. ಅಶೋಕ್

ಬಿಜೆಪಿ ಪ್ರತಿಭಟನೆಯಲ್ಲಿ ಮಾಜಿ ಡಿಸಿಎಂ ಆರ್.ಅಶೋಕ್ ಹೇಳಿಕೆ ನೀಡಿದ್ದಾರೆ. ‘ ದಂಗೆ ಪದ ಪ್ರಯೋಗ ಯಾರು ಮಾಡಲ್ಲ. ಸಂವಿಧಾನದತ್ತ ಸ್ಥಾನದಲ್ಲಿರುವ ಸಿಎಂ ನಕ್ಸಲ್ ರೀತಿಯಾಗಿ ಹೇಳಿಕೆ ನೀಡಿದ್ದಾರೆ. ಸಿಎಂ ಹೇಳಿಕೆ ಬೇಲಿಯೇ ಎದ್ದು ಹೊಲ ಮೈದಂತ್ತಿದೆ ‘ ಎಂದಿದ್ದಾರೆ.

‘ ಕುಮಾರಸ್ವಾಮಿ ಗೆ ದಿಕ್ಕು ದೆಸೆ ಏನು ಕಾಣ್ತಿಲ್ಲ. ಸರ್ಕಾರ ಇರುತ್ತೋ ಹೋಗುತ್ತೋ ಅನ್ನೋದು ಸ್ವತಃ ಸಿಎಂ ಗೆ ಗೊತ್ತಿಲ್ಲ. ಸರ್ಕಾರದ ಮಂತ್ರಿಗಳು ಭಿನ್ನಮತ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಮಂತ್ರಿ ಮಾಡದೇ ಇದ್ರೆ ಶಾಸಕರು ಸರ್ಕಾರ ಕೆಡುವುದಾಗಿ ಹೇಳ್ತಾರೆ. ಸಿಎಂ ಗೆ ತಾಕತ್ತಿದ್ರೆ, ಧಮ್ ಇದ್ರೆ ಭಿನ್ನಮತ ಮಂತ್ರಿಗಳು ಮತ್ತು ಶಾಸಕರ ವಿರುದ್ಧ ಕ್ರಮ ಕೈಗೊಳ್ಳಬೇಕಿತ್ತು ‘ ಎಂದು ಹೇಳಿದ್ದಾರೆ.

‘ ಸರ್ಕಾರ ನೂರು ದಿನ ಪೂರೈಸಿದ್ರು ಅಭಿವೃದ್ಧಿ ಕಾಣ್ತಿಲ್ಲ. ಸರ್ಕಾರ ಇದ್ರೂ ಅಷ್ಟೇ ಬಿದ್ರೂ ಅಷ್ಟೇ ಅಂತ ಕಾಂಗ್ರೆಸ್ ನವರೇ ಹೇಳ್ತವರೇ. ಕುಮಾರಸ್ವಾಮಿ ದುರಂಹಕರಾದಿಂದ ಸರ್ಕಾರ ಬಿದ್ರೆ ಬೀಳುತ್ತೆ ‘ ಸಿಎಂ ಕುಮಾರಸ್ವಾಮಿ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.

‘ ದಂಗೆ ಪದದ ಅರ್ಥ ಸಿಎಂ ಗೊತ್ತಿಲ್ಲ ಕಾಣ್ಸುತ್ತೆ. ದಂಗೆ ಪದ ಅರ್ಥ ಕುಮಾರಸ್ವಾಮಿ ಡಿಕ್ಷನರಿ ತಗೆದು ನೋಡಲಿ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಬೇಕು ಅಂತ ಸಂಜೆ ರಾಜ್ಯಪಾಲರಿಗೆ ದೂರು ನೀಡಲಿದ್ದೇವೆ. ದಂಗೆ ಹೇಳಿಕೆ ಬಳಿಕ ಸರ್ಕಾರ ಉಳಿಯುವ ಲಕ್ಷಣ ಕಾಣ್ತಿಲ್ಲ. ಕಾನೂನು ಕಾಪಾಡುವ ದೃಷ್ಟಿಯಿಂದ ಬಿಜೆಪಿ ಪ್ರತಿಭಟನೆಗೆ ಇಳಿದಿದೆ ‘ ಎಂದಿದ್ದಾರೆ.

‘ ನಾವು ಯಾವುದೇ ಕಾರಣಕ್ಕೂ ಸರ್ಕಾರ ಬೀಳ್ಸಲ್ಲ. ಸರ್ಕಾರಕ್ಕೆ ನೂರು ದಿನ ನೂರು ತಪ್ಪಾಗಿದೆ. ಜನರು ಸರ್ಕಾರ ತೊಲಗಲಿ ಅಂತ ಬೀದಿಯಲ್ಲಿ ಮಾತ್ನಾಡ್ತಾರೆ ‘ ಎಂದು ಸಮ್ಮಿಶ್ರ ಸರ್ಕಾರದ ವಿರುದ್ಧ ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published.