ನಕ್ಷತ್ರ ಆಮೆಗಳನ್ನು ಸಾಗಣೆ ಮಾಡುತ್ತಿದ್ದವರ ಬಂಧನ : ಕಾರು ಹಾಗೂ 3 ಆಮೆ ಪೊಲೀಸರ​ ವಶ

ಮೈಸೂರು : ನಕ್ಷತ್ರ ಆಮೆ ಸಾಗಣೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಮೈಸೂರಿನ  ಹುಣಸೂರು ಪಟ್ಟಣದ ನಡೆದಿದೆ.

ನಾಸೀರ್ , ರಿಯಾಜ್  ಬಂಧಿತ ಆರೋಪಿಗಳು. ಕಾರಿನಲ್ಲಿ ಅಕ್ರಮವಾಗಿ ನಕ್ಷತ್ರ ಆಮೆ ಸಾಗಣೆ ಮಾಡುವ ವೇಳೆ ನಾಸೀರ್​, ರಿಯಾಜ್​ ಆರೋಪಿಗಳು ಸಿಕ್ಕಿ ಬಿದ್ದಿದ್ದಾರೆ. ಬಂಧಿತರು ಕೇರಳ ಮೂಲದವರು‌ ಎನ್ನಲಾಗುತ್ತಿದೆ. ಕಾರು ಮತ್ತು ನಕ್ಷತ್ರದ ಆಮೆಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಪ್ರಕರಣಕ್ಕೆ ಸಂಬಂಧ ಹುಣಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com