‘ಬಿಜೆಪಿ ಸರ್ಕಾರ ರಚನೆಯ ಹಗಲು ಕನಸು ಕಾಣುತ್ತಿದೆ’ : ಜಮೀರ್​ ಅಹ್ಮದ್​

ಹುಬ್ಬಳ್ಳಿ : ‘ಮೈತ್ರಿ ಸರ್ಕಾರದಲ್ಲಿ ಯಾವುದೇ  ಭಿನ್ನಮತವಿಲ್ಲ, ಯಾವ ಶಾಸಕರೂ ಬಿಜೆಪಿಗೆ ಹೋಗಲ್ಲ’ ಎಂದು ಹುಬ್ಬಳ್ಳಿಯಲ್ಲಿ ಜಮೀರ್​ ಅಹ್ಮದ್​ ಹೇಳಿಕೆ ನೀಡಿದ್ದಾರೆ.

‘ಐದು ವರ್ಷಗಳ ಕಾಲ ಮೈತ್ರಿ ಸರ್ಕಾರ ಮುಂದುವರೆಯಲಿದೆ, ಸರ್ಕಾರದಲ್ಲಿ ಯಾವುದೇ ಭಿನ್ನಮತವಿಲ್ಲ, ಯಾವ ಶಾಸಕರಲ್ಲೂ ಅಸಮಾಧಾನ ಇಲ್ಲ, ಮೈತ್ರಿ ಸರ್ಕಾರ ರಚನೆಯಾದಾಗಿನಿಂದಲೂ ಸರ್ಕಾರ ಬೀಳಿಸುವ ಪ್ರಯತ್ನ ನಡೆಯುತ್ತಿದೆ, ಬಿಜೆಪಿಯವರು ಸರ್ಕಾರ ರಚನೆಯ ಹಗಲು ಕನಸು ಕಾಣುತ್ತಿದ್ದಾರೆ, ಆದ್ರೆ ಅವರಿಗೆ ಫಲ ಸಿಗುವುದಿಲ್ಲ’ ಎಂದು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸಚಿವ ಜಮೀರ್ ಅಹ್ಮದ್​ ತಿಳಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com