ಕುಮಾರಸ್ವಾಮಿ ನೈತಿಕ ದಾರಿಯಲ್ಲಿ ಮುಖ್ಯಮಂತ್ರಿ ಆಗಿಲ್ಲ : ಸಿ.ಟಿ ರವಿ

ಚಿಕ್ಕಮಗಳೂರು : ಚಿಕ್ಕಮಗಳೂರಿನಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿಕೆ ನೀಡಿದ್ದಾರೆ. ‘ ಸಿ.ಎಂ ಕುಮಾರಸ್ವಾಮಿ ಹತಾಶ ರಾಗಿದ್ದಾರೆ. ದಂಗೆಗೆ ಕರೆ ಕೊಡುವ ಹೇಳಿಕೆ ಸಂವಿಧಾನ ಬಾಹಿರ ಹಾಗೂ ಖಂಡನೀಯ. ಕೂಡಲೇ ಅವರು ಕ್ಷಮೆಯಾಚಿಸಬೇಕು ‘ ಎಂದಿದ್ದಾರೆ.

‘ ಕುಮಾರಸ್ವಾಮಿ ನೈತಿಕ ದಾರಿಯಲ್ಲಿ ಮುಖ್ಯಮಂತ್ರಿ ಆಗಿಲ್ಲ. ಅಧಿಕಾರಕ್ಕಾಗಿ ಯಾವುದೇ ಕಾಂಪ್ರೊಮೈಸ್ ಮಾಡಿಕೊಳ್ಳುವವರು ಇಷ್ಟೊಂದು ಪೌರುಷದ ಮಾತುಗಳನ್ನು ಆಡುವ ಅವಶ್ಯಕತೆ ಇಲ್ಲ. ಆಪರೇಷನ್, ಬಂಡಾಯ ನೀವು ಮಾಡದಿರುವ ಕೆಲಸ ಇಲ್ಲ. ನೀವು ಮಾಡಿದ್ರೆ ಪ್ರಜಾಪ್ರಭುತ್ವ ಮಾರ್ಗ ಬೇರೆಯವರು ಮಾಡಿದ್ರೆ ಪ್ರಜಾಪ್ರಭುತ್ವ ವಿರೋಧಿ ಎನ್ನುವುದು ಸಿ.ಎಂ ದ್ವಂದ್ವ ನಿಲುವನ್ನು ತೋರಿಸುತ್ತದೆ ‘ ಎಂದಿದ್ದಾರೆ.

‘ ಸರ್ಕಾರ ಅಸ್ಥಿರಗೊಳಿಸುವ ಯಾವುದೇ ಚಟುವಟಿಕೆ ಬಿಜೆಪಿ ನಡೆಸಿಲ್ಲ. ಆಂತರಿಕ ಕುಸಿತದಿಂದ ಸರ್ಕಾರ ಬಿದ್ರೆ ಉಳಿಸುವ ಜವಾಬ್ದಾರಿ ನಮ್ಮದಲ್ಲ ‘ ಎಂದು ಸಿ.ಟಿ ರವಿ ಹೇಳಿದ್ದಾರೆ.

One thought on “ಕುಮಾರಸ್ವಾಮಿ ನೈತಿಕ ದಾರಿಯಲ್ಲಿ ಮುಖ್ಯಮಂತ್ರಿ ಆಗಿಲ್ಲ : ಸಿ.ಟಿ ರವಿ

Leave a Reply

Your email address will not be published.