ಬೌಲಿಂಗ್ ಮಾಡುವಾಗ ಗಾಯಗೊಂಡ ಹಾರ್ದಿಕ್ – ಪಾಂಡ್ಯ ಆರೋಗ್ಯದ ಬಗ್ಗೆ BCCI ಹೇಳಿದ್ದೇನು.?

ದುಬೈ ಅಂತರಾಷ್ಟ್ರೀಯ ಮೈದಾನದಲ್ಲಿ ಬುಧವಾರ ನಡೆದ ಪಾಕಿಸ್ತಾನ ಹಾಗೂ ಭಾರತದ ನಡುವಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಬೆನ್ನು ನೋವಿನ ಗಾಯಕ್ಕೆ ಒಳಗಾಗಿದ್ದಾರೆ.

18ನೇ ಓವರಿನ 5ನೇ ಎಸೆತವನ್ನು ಬೌಲ್ ಮಾಡುವಾಗ ಕಾಲು ಜಾರಿದ ಕಾರಣ ಹಾರ್ದಿಕ್ ಪಾಂಡ್ಯ ಕುಸಿದು ಬಿದ್ದಿದ್ದಾರೆ. ಎದ್ದು ನಿಲ್ಲಲೂ ಸಹ ಆಗದೇ ನೋವಿನಿಂದ ನರಳಾಡುತ್ತಿದ್ದ ಅವರನ್ನು ಸ್ಟ್ರೇಚರ್ ಮೂಲಕ ಮೈದಾನದ ಹೊರಕ್ಕೆ ಸಾಗಿಸಲಾಯಿತು. ಟೀಮ್ ಇಂಡಿಯಾದ ಪ್ರಮುಖ ಆಟಗಾರರಲ್ಲಿ ಒಬ್ಬರೆನಿಸಿರುವ ಹಾರ್ದಿಕ್ ಕುಸಿದು ಬಿದ್ದದನ್ನು ಕಂಡು ಕ್ರಿಕೆಟ್ ಅಭಿಮಾನಿಗಳಲ್ಲಿ ಗಾಬರಿ ಉಂಟಾಗಿತ್ತು.

ಕೆಲಹೊತ್ತಿನ ಬಳಿಕ ಹಾರ್ದಿಕ್ ಪಾಂಡ್ಯ ಗಾಯದ ಬಗ್ಗೆ ಬಿಸಿಸಿಐ ಮಾಹಿತಿ ನೀಡಿದ್ದು, ‘ ಪಾಂಡ್ಯ ಬೆನ್ನಿನ ಕೆಳ ಭಾಗದಲ್ಲಿ ಗಾಯವಾಗಿದೆ. ಹಾರ್ದಿಕ್ ಈಗ ಎದ್ದು ನಿಲ್ಲಲು ಸಮರ್ಥರಾಗಿದ್ದಾರೆ. ನಮ್ಮ ವೈದ್ಯಕೀಯ ತಜ್ಞರ ತಂಡ ಪಾಂಡ್ಯ ಆರೋಗ್ಯದ ಬಗ್ಗೆ ನಿಗಾವಹಿಸುತ್ತಿದ್ದು ಚಿಕಿತ್ಸೆ ನೀಡುತ್ತಿದ್ದಾರೆ ‘ ಎಂದು ಟ್ವೀಟ್ ಮಾಡಿದೆ.

ಮುಂದಿನ ಪಂದ್ಯಕ್ಕೆ ಹಾರ್ದಿಕ್ ಪಾಂಡ್ಯ ಲಭ್ಯರಾಗಲಿದ್ದಾರೆಯೇ ಎಂಬುದರ ಬಗ್ಗೆ ಸದ್ಯಕ್ಕೆ ಯಾವುದೇ ಮಾಹಿತಿಯಿಲ್ಲ.

Leave a Reply

Your email address will not be published.