‘ನನ್ನ, ಸಿದ್ದು ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ, ನಾವು ಚೆನ್ನಾಗಿದ್ದೇವೆ’ : H C ಮಹದೇವಪ್ಪ ಸ್ಪಷ್ಟನೆ

ಬೆಂಗಳೂರು : ‘ನನ್ನ ಮತ್ತು ಸಿದ್ದು ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ, ನಾನು ಸಿದ್ದು ಯಾವಾಗಲು ಜೊತೆಗೆ ಇದ್ದೇವೆ, ಯಾವತ್ತೂ ದೂರ ಆಗಿಲ್ಲ’  ಮಾಜಿ ಸಚಿವ ಡಾ. ಹೆಚ್ ಸಿ ಮಹದೇವಪ್ಪ ಹೇಳಿಕೆ ನೀಡಿದ್ದಾರೆ.

ಜ್ಞಾನ ಬುತ್ತಿ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆ ಕುರಿತು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ  ಮಾಜಿ ಸಚಿವ ಹೆಚ್ ಸಿ ಮಹದೇವಪ್ಪ, ‘ಸಿದ್ದು ವಿದೇಶಕ್ಕೆ ತೆರಳುವಾಗಲು ದೂರವಾಣಿ ಕರೆ ಮಾಡಿ ನಾನು ಶುಭ ಕೋರಿದ್ದೆ, ನನ್ನ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ನಡುವೆ ಭಿನ್ನಾಭಿಪ್ರಾಯ ಇದೆ ಅನ್ನೋದು ಸುಳ್ಳು, ನಮ್ಮಲ್ಲಿ ಯಾವುದೇ ಗೊಂದಲವಿಲ್ಲ , ಕಾಂಗ್ರೆಸ್ ಪಕ್ಷ ಸ್ಪಷ್ಟವಾಗಿದೆ, ಯಾವುದೇ ಗೊಂದಲಗಳಿಲ್ಲ, ಕೋಮು ಪಕ್ಷ ಬಿಜೆಪಿಯನ್ನ ದೂರವಿಡಲು ಜೆಡಿಎಸ್ ನೊಂದಿಗೆ ಮೈತ್ರಿ ಮಾಡಿಕೊಂಡಿದ್ದೇವೆ ಮೈತ್ರಿ ಸರ್ಕಾರ ಭದ್ರವಾಗಿದೆ, 5 ವರ್ಷ ಆಡಳಿತ ಸಂಪೂರ್ಣ ಗೊಳಿಸಲಿದೆ’ ಎಂದು ಹೆಚ್​.ಸಿ ಮಹದೇವಪ್ಪ ತಿಳಿಸಿದ್ದಾರೆ.

hc mahadevappa and siddaramaiah ಗೆ ಚಿತ್ರದ ಫಲಿತಾಂಶ

‘ನಾನು ಕಾಂಗ್ರೆಸ್ ನಲ್ಲೆ ಇದ್ದೇನೆ,  ಹಿಂದೆ ಆಗಿರುವ ತಪ್ಪುಗಳನ್ನ ತಿದ್ದುಕೊಂಡು ಮತ್ತೆ ಪಕ್ಷವನ್ನ ಅಧಿಕಾರಕ್ಕೆ ತರುತ್ತೇವೆ. ಸ್ಥಳೀಯ ಸಂಸ್ಥೆ ಚುನಾವಣೆ ಯಲ್ಲಿ ನನ್ನ ಮಗ ಹಾಗೂ ಯತೀಂದ್ರ ಸಿದ್ದರಾಮಯ್ಯ ಮತ್ತು ಸ್ಥಳೀಯ ಮುಖಂಡರು ನೋಡ್ಕೊಂಡ್ರು ಹಾಗಾಗಿ ನಾನು ತಲೆ ಹಾಕಲಿಲ್ಲ’ ಎಂದು ತಿಳಿಸಿದ್ರು.

Leave a Reply

Your email address will not be published.