WATCH : ಬೌಂಡರಿ ಲೈನ್ ಬಳಿ ಮನೀಶ್ ಪಾಂಡೆ ಅದ್ಭುತ ಕ್ಯಾಚ್ – ಟ್ವಿಟರ್ ನಲ್ಲಿ ಫ್ಯಾನ್ಸ್ ಮೆಚ್ಚುಗೆ

ದುಬೈನಲ್ಲಿ ಬುಧವಾರ ನಡೆದ ‘ಎ’ ಗುಂಪಿನ ಲೀಗ್ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಎಲ್ಲ ವಿಭಾಗಗಳಲ್ಲಿ ಪ್ರಾಬಲ್ಯ ಮೆರೆದ ಭಾರತ 8 ವಿಕೆಟ್ ಭರ್ಜರಿ ಜಯ ಸಾಧಿಸಿತು. ಈ ಪಂದ್ಯದಲ್ಲಿ ಮನೀಶ್ ಪಾಂಡೆ ಅದ್ಭುತ ಕ್ಯಾಚ್ ಪಡೆಯುವ ಮೂಲಕ ತಾವೊಬ್ಬ ಅತ್ಯುತ್ತಮ ಫೀಲ್ಡರ್ ಎಂಬುದನ್ನು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ.

18ನೇ ಬೌಲ್ ಮಾಡುವ ವೇಳೆ ಗಾಯಗೊಂಡ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರನ್ನು ಸ್ಟ್ರೇಚರ್ ಮೂಲಕ ಮೈದಾನದಿಂದ ಹೊರಸಾಗಿಸಲಾಯಿತು. ಈ ವೇಳೆ ಹಾರ್ದಿಕ್ ಬದಲು ಮನೀಶ್ ಪಾಂಡೆ ಫೀಲ್ಡಿಂಗ್ ಮಾಡಲು ಕಣಕ್ಕಿಳಿದರು.

ಪಾಕಿಸ್ತಾನ ನಾಯಕ ಸರ್ಫರಾಜ್ ಅಹ್ಮದ್ ಬಾರಿಸಿದ ಚೆಂಡನ್ನು ಲಾಂಗ್ ಆನ್ ಕ್ಷೇತ್ರದಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಮನೀಶ್ ಪಾಂಡೆ ಅತ್ಯದ್ಭುತ ರೀತಿಯಲ್ಲಿ ಕ್ಯಾಚ್ ಪಡೆದರು. ಇಲ್ಲಿದೆ ವಿಡಿಯೋ..

ಮನೀಶ್ ಪಾಂಡೆ ಪಡೆದ ಕ್ಯಾಚ್ ಬಗ್ಗೆ ಟ್ವಿಟರ್ ನಲ್ಲಿ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಹಾಗೂ ಹಲವಾರು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 

Leave a Reply

Your email address will not be published.