ನಾನು ಧಮ್ಕಿಗೆ ಬಗ್ಗುವವನಲ್ಲ, ನೀವು ಮಾಡಿದಕ್ಕೆ ಪ್ರತಿಯಾಗಿ ಮಾಡಲು ನಮಗೂ ಗೊತ್ತಿದೆ : ಸಿಎಂಗೆ ಬಿಎಸ್​ವೈ ಟಾಂಗ್​

ಬೆಂಗಳೂರು : ನನ್ನ ಇತಿಮಿತಿ ನನಗೆ ಗೊತ್ತಿದೆ, ಹದ್ದು ಮೀರಿ ಮಾತನಾಡುತ್ತಿರುವುದು ನೀವು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿಯವರ ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಟಾಂಗ್​ ನೀಡಿದ್ದಾರೆ.

ಸಿಎಂ ಕುಮಾರಸ್ವಾಮಿ ಪರ್ಸಂಟೇಜ್‌ ಸಿಸ್ಟಂನ ಜನಕ ಎಂದು ಬಿಎಸ್​ವೈರನ್ನು ಆರೋಪಿಸಿ ನೀಡಿರುವ ಹೇಳಿಕೆಗೆ ತೀರುಗೇಟು ನೀಡಿದ ಯಡಿಯೂರಪ್ಪ, ‘ನನ್ನ ಇತಿಮಿತಿ ನನಗೆ ಗೊತ್ತಿ, ಹದ್ದು ಮೀರಿ ಮಾತನಾಡುತ್ತಿರುವುದು ನೀವುಗಳು, ನಾನು ಧಮ್ಕಿಗೆ ಬಗ್ಗುವವನಲ್ಲಾ, ಕೇಂದ್ರದಲ್ಲಿ ಇರುವ ನರೇಂದ್ರ ಮೋದಿ ಸರ್ಕಾರ ನಮ್ಮದು, ನೀವು ಮಾಡಿದಕ್ಕೆ ಪ್ರತಿಯಾಗಿ ಮಾಡಲು ನಮಗೂ ಗೊತ್ತಿದೆ, ನನ್ನ ಬಗ್ಗೆ ಮಾತನಾಡುವ ನೈತಿಕ ಹಕ್ಕು ನಿನಗಿಲ್ಲ  ಎಂದು ಡಾಲರ್ಸ್​ ಕಾಲೋನಿಯಲ್ಲಿ ಸುದ್ದಿಗಾರರೊಂದಿಗೆ ಬಿಎಸ್​ವೈ ಮಾತನಾಡಿದ್ದಾರೆ.

 

Leave a Reply

Your email address will not be published.