ಪ್ರವಾಸೋದ್ಯಮ ಇಲಾಖೆಯ ಬ್ರಾಂಡ್ ಅಂಬಾಸಿಡರ್ ಆಗುವಂತೆ ಯದುವೀರ್ ಗೆ ಸಚಿವರ ಮನವಿ

2018ರ ದಸರಾ ಮಹೋತ್ಸವ ಹಿನ್ನೆಲೆಯಲ್ಲಿ ಪ್ರವಾಸೋದ್ಯಮ ಇಲಾಖೆಯ ಬ್ರಾಂಡ್ ಅಂಬಾಸಿಡರ್ ಆಗಬೇಕೆಂದು ಯದುವೀರ್ ಗೆ ಸಚಿವ ಸಾರಾ.ಮಹೇಶ್ ಮನವಿ ಮಡಿಕೊಂಡಿದ್ದಾರೆ. ಪ್ರವಾಸೋಧ್ಯಮ ಇಲಾಖೆಗೆ ಅಂಬಾಸಿಡರ್ ಆಗಿ ಒಪ್ಪಿಕೊಳ್ಳಬೇಕು ಎಂದು ಮನವಿ ಮಾಡಿದ್ದೇನೆ ಎಂದು ಸಚಿವ ಸಾರಾ ಮಹೇಶ್ ಸ್ಪಷ್ಟಪಡಿಸಿದ್ದಾರೆ.

‘ ಈ ಬಗ್ಗೆ ರಾಜವಂಶಸ್ಥ ಯದುವೀರ್ ಅವರು ಪೂರಕವಾಗಿ ಸ್ಪಂದಿಸಿದ್ದಾರೆ. ಈ ಬಗ್ಗೆ ಹಿರಿಯ ರೊಂದಿಗೆ ಮಾತುಕತೆ ನಡೆಸಿ ತಿಳಿಸುತ್ತೇನೆ ಎಂದು ಯದುವೀರ್ ತಿಳಿಸಿದ್ದಾರೆ ‘ ಎಂದು ಸಚಿವ ಸಾರಾ ಮಹೇಶ್ ಹೇಳಿದ್ದಾರೆ.

ಮೈಸೂರು , ಚಾಮರಾಜ ನಗರ , ಮಂಡ್ಯ ಕೊಡಗು , ಹಾಸನ ಸೇರಿದಂತೆ ಹಳೆ ಮೈಸೂರು ಪ್ರಾಂತ್ಯಕ್ಕೆ ಪ್ರವಾಸೋಧ್ಯಮ ಇಲಾಖೆಯ ಅಂಬಾಸಿಡರ್ ಆಗುವಂತೆ ಸಚಿವ ಸಾರಾ ಮಹೇಶ್ ಎಂದು ಮನವಿ ಮಾಡಿಕೊಂಡಿದ್ದಾರೆ.

Leave a Reply

Your email address will not be published.