ಏರ್​ ಜೆಟ್​ನಲ್ಲಿ ಭಾರೀ ಎಡವಟ್ಟು : ಸಿಬ್ಬಂದಿಯ ಅಜಾಗರೂಕತೆಯಿಂದ ಪ್ರಯಾಣಿಕರ ಕಿವಿ, ಮೂಗಿನಲ್ಲಿ ರಕ್ತ

ನವದೆಹಲಿ : ಏರ್​ ಜೆಟ್​ ಸಿಬ್ಬಂದಿಯ ಎಡವಟ್ಟಿನಿಂದಾಗಿ ಪ್ರಯಾಣಿಕರ ಕಿವಿ ಮೂಗಿನಲ್ಲಿ ರಕ್ತ ಸೋರಿದ ಘಟನೆ ಇಂದು ಬೆಳಗ್ಗೆ  ನಡೆದಿದೆ.

ಮುಂಬಯಿ ವಿಮಾನ ನಿಲ್ದಾಣದಿಂದ ಜೈಪುರಕ್ಕೆ ಹೊರಟಿದ್ದ ಜೆಟ್‌ ಏರ್‌ವೇಸ್‌ ವಿಮಾನದಲ್ಲಿ ಅವಘಡ ನಡೆದಿದೆ. ವಿಮಾನದ ಸಿಬ್ಬಂದಿಯ ಎಡವಟ್ಟಿನಿಂದಾಗಿ ಪ್ರಯಾಣಿಕರ ಮೂಗು, ಕಿವಿಯಲ್ಲಿ ರಕ್ತ ಕಾಣಿಸಿಕೊಂಡಿದೆ. ಏರ್‌ ಕ್ಯಾಬಿನ್ ಒತ್ತಡ ನಿರ್ವಹಿಸಲು ವಿಫಲರಾಗಿದ್ದೇ ಇದಕ್ಕೆ ಕಾರಣ ಎಂದು ತಿಳಿದುಬಂದಿದೆ.

ಇಂದು ಬೆಳಗ್ಗೆ ಮುಂಬಯಿ ವಿಮಾನ ನಿಲ್ದಾಣದಿಂದ ಜೆಟ್‌ ಏರ್‌ವೇಸ್ B737 ವಿಮಾನ ಜೈಪುರಕ್ಕೆ ಹೊರಟಿದೆ. ವಿಮಾನದಲ್ಲಿ 166ಪ್ರಯಾಣಿಕರಿದ್ದರು.  ಕ್ಯಾಬಿನ್​ ಒತ್ತಡ  ಸಮಸ್ಯೆಯನ್ನು ನಿಯಂತ್ರಿಸಲು ಅಳವಡಿಸಿದ್ದ ಸ್ವಿಚನ್ನು ಆನ್​ ಮಾಡಲು ಸಿಬ್ಬಂದಿಗಳು ಮರೆತಿದ್ದರಿಂದ ಈ ಅವಘಡಕ್ಕೆ ಕಾರಣವಾಗಿದೆ.

ನಂತರ ಆಮ್ಲಜನಕ ಮುಖವಾಡಗಳನ್ನು ನಿಯೋಜಿಸಲಾಗಿದ್ದು, ಬಳಿಕ ವಿಮಾನ ಪುನ: ಮುಂಬೈಗೆ ಬಂದಿಳಿದಿದೆ. ಅಲ್ಲದೆ, ಅನಾರೋಗ್ಯಕ್ಕೀಡಾಗಿರುವ ಪ್ರಯಾಣಿಕರಿಗೆ ಏರ್‌ಪೋರ್ಟ್‌ನಲ್ಲೇ ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಈ ಘಟನೆಯ ಕುರಿತು ತನಿಖೆ ಪ್ರಾರಂಭವಾಗಿದೆ.

One thought on “ಏರ್​ ಜೆಟ್​ನಲ್ಲಿ ಭಾರೀ ಎಡವಟ್ಟು : ಸಿಬ್ಬಂದಿಯ ಅಜಾಗರೂಕತೆಯಿಂದ ಪ್ರಯಾಣಿಕರ ಕಿವಿ, ಮೂಗಿನಲ್ಲಿ ರಕ್ತ

Leave a Reply

Your email address will not be published.