ಸುಮ್ಮನೆ ಕುಳಿತುಕೊಳ್ಳದಿದ್ದರೆ, ನಿನ್ನ ಕಾಲು ಮುರಿತೀನಿ : ಕೇಂದ್ರ ಸಚಿವರಿಂದ ವ್ಯಕ್ತಿಗೆ ಧಮ್ಕಿ..!

ಕೋಲ್ಕತ್ತ : ಸದಾ ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಲ್ಲಿರುವ ಕೇಂದ್ರ ಸಚಿವ ಬಬುಲ್​ ಸುಪ್ರಿಯೊ ಇದೀಗ ಮತ್ತೊಮ್ಮೆ ನಾಲಿಗೆ ಹರಿಬಿಟ್ಟಿದ್ದಾರೆ. ನಿನ್ನ ಕಾಲನ್ನು ಮುರಿಯುತ್ತೇನೆ ಎಂದು ವ್ಯಕ್ತಿಯೊಬ್ಬನಿಗೆ ಧಮ್ಕಿ ಹಾಕಿದ್ದು, ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಪಶ್ವಿಮ ಬಂಗಾಳದ ಅಸನ್ಸೋಲ್​ ಪ್ರದೇಶದಲ್ಲಿ ನಡೆದ ಅಂಗವಿಕಲರ ಸಮಾವೇಶದಲ್ಲಿ ಕೆಂದ್ರ ಸಚಿವ ಬಬುಲ್​ ಸುಪ್ರಿಯೊ,  ಸಭೆಯಲ್ಲಿ ಸಚಿವರು ಭಾಷಣ ಮಾಡುತ್ತಿರುವಾಗ ವ್ಯಕ್ತಿಯೊಬ್ಬ ಅಡ್ಡಾ-ದಿಡ್ಡಿಯಾಗಿ ಓಡಾಡುತ್ತಿದ್ದನು. ಇದನ್ನು ಪ್ರಶ್ನಿಸಿದ ಸುಪ್ರಿಯೋ ಏಕೆ ಓಡಾಡುತ್ತಿದ್ದೀಯಾ? ಸುಮ್ಮನೇ ಕುಳಿತುಕೋ ಇಲ್ಲ ನಿನ್ನ ಕಾಲು ಮುರಿಯುತ್ತೇನೆ ಎಂದು ಬೆದರಿಸಿದ್ರು.

ಸಂಬಂಧಿತ ಚಿತ್ರ

ಸಚಿವರ ಮಾತಿಗೆ ಕ್ಯಾರೆ ಎನ್ನದ ವ್ಯಕ್ತಿ ಪದೇ ಪದೇ ಅದೇ ರೀತಿ ಓಡಾಡುತ್ತಿದ್ದನು ಇದರಿಂದ ಕೋಪಗೊಂಡ ಸಚಿವರು ನಿನಗೇನಾಗಿದೆ, ಏನಾದರೂ ಸಮಸ್ಯೆನಾ ಸುಮ್ಮನೆ ಕುಳಿತುಕೊಳ್ಳದ್ದಿದ್ದಾರೆ, ಕಾಲು ಮುರಿಯುತ್ತೆನೆ ಎಂದು ಹೇಳಿ, ನಂತರ ಅಲ್ಲಿದ್ದ ಭದ್ರತಾ ಸಿಬ್ಬಂದಿಗಳನ್ನು ಕರೆದು ಅವನು  ಅದೇ ರೀರಿ ಮಾಡಿದ್ದಾರೆ ಕಾಲು ಮುರಿದು ಊರುಗೋಲು ಕೊಟ್ಟು ಕುರಿಸಿ ಎಂದು ತಿಳಿಸಿದ್ರು. ಈ ವಿಡಿಯೊ ಎಲ್ಲೆಡೆ ವೈರಲ್​ ಆಗಿದ್ದು, ಸಚಿವರ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ರು.

 

Leave a Reply

Your email address will not be published.