ನಾವು ಸರ್ಕಾರಿ ಭೂಮಿಯನ್ನು ಕಬಳಿಸಿದ್ದರೆ ಮುಟ್ಟುಗೋಲು ಹಾಕಿಕೊಳ್ಳಲಿ : ಎಚ್.ಡಿ ರೇವಣ್ಣ

ಹಾಸನ : ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಡಿ.ರೇವಣ್ಣ ಹೇಳಿಕೆ ನೀಡಿದ್ದಾರೆ. ಸರ್ಕಾರಿ ಭೂಮಿ ಕಬಳಿಕೆ ಆರೋಪ ಮಾಡಿರುವ ಮಾಜಿ ಸಚಿವ ಎ.ಮಂಜುಗೆ ಪ್ರತಿಕ್ರಿಯೆ ನೀಡಿದ್ದಾರೆ. ‘ ಅವರಿಗೆ ಈಗ ಬಿಡುವು ಇದೆ, ಅದ್ಕೆ ಮಾತಾಡ್ತಿದಾರೆ ‘ ಎಂದಿದ್ದಾರೆ.

‘ ಯಡಿಯೂರಪ್ಪನವರು ನಮ್ಮ ಕುಟುಂಬ ಭೂಮಿ ಕಬಳಿಸಿದೆ ಎಂದು ಪದೇ ಪದೇ ಆರೋಪಿಸುತ್ತಿದ್ದಾರೆ, ಯಡಿಯೂರಪ್ಪ ಅವರಿಗೆ ಇನ್ನು ಬುದ್ದಿ ಬಂದಿಲ್ಲ ‘ ಎಂದಿದ್ದಾರೆ. ನಾವು ಸರ್ಕಾರಿ ಭೂಮಿ ಕಬಳಿಸಿದ್ದರೆ ಮುಟ್ಟುಗೋಲು ಹಾಕಿಕೊಳ್ಳಲಿ. ಯಾವ ರೀತಿಯ ತನಿಖೆಗೂ ಸಿದ್ದರಿದ್ದೇವೆ. ಆಧಾರ ರಹಿತ ಆರೋಪಗಳಿಗೆ ಪ್ರತಿಕ್ರಿಯೆ ನೀಡಲು ಹೊರಟರೆ ನಾನು ಪೊಳ್ಳೆದ್ದು ಹೋಗುತ್ತೇನೆ ‘ ಎಂದಿದ್ದಾರೆ.

‘ ನಿರ್ಮಲಾನಂದನಾಥ ಸ್ಚಾಮೀಜಿ ನಮ್ಮ ಸಮಾಜದ ಆಸ್ತಿ ಯಾಗಿದ್ದು ಅವರ ಕುರಿತು ಹಗುರವಾಗಿ ಮಾತನಾಡುವುದು‌ ಸರಿಯಲ್ಲ ‘ ಹಾಸನದಲ್ಲಿ ಸಚಿವ ಹೆಚ್.ಡಿ.ಆರ್ ಹೇಳಿಕೆ ನೀಡಿದ್ದಾರೆ.

Leave a Reply

Your email address will not be published.