ದೇವನಹಳ್ಳಿ : ಮೊಹರಂ ಮೆರವಣಿಗೆಯಲ್ಲಿ ಪಾಕ್ ಬಾವುಟ ಪ್ರದರ್ಶನ – ಗುಂಪು ಘರ್ಷಣೆ

ದೇವನಹಳ್ಳಿ : ಮೊಹರಂ ಕಡೆ ದಿನ ಮೆರವಣಿಗೆಯಲ್ಲಿ ಪಾಕಿಸ್ತಾನ ಬಾವುಟವನ್ನು ಪ್ರದರ್ಶಿಸಲಾಗಿರುವ ಘಟನೆ ದೇವನಹಳ್ಳಿ ತಾಲ್ಲೂಕು ವಿಜಯಪುರದಲ್ಲಿ ನಡೆದಿದೆ. ಮೆರವಣಿಗೆಯಲ್ಲಿ ಭಾಗವಹಿಸಿದ್ದ ವಾದ್ಯವೃಂದದವರು ಪಾಕಿಸ್ಥಾನಿ ಟಿ ಶರ್ಟ್ ಧರಿಸಿದ್ದರು. ಇದರಿಂದ ಮತ್ತೊಂದು ಕೋಮಿನವರು ಕೆಂಡಾಮಂಡಲವಾಗಿದ್ದಾರೆ.

ಎರಡು ಕೋಮಿನ ಜನರ ನಡುವೆ ಗಲಾಟೆ ಆರಂಭಗೊಂಡಿದೆ. ತಾರಕಕ್ಕೇರಿದ ಗಲಾಟೆಯನ್ನು ನಿಯಂತ್ರಿಸಲು ಲಘು ಲಾಠಿ ಪ್ರಹಾರ ನಡೆಸಲಾಗಿದೆ.  ತಡರಾತ್ರಿಯಲ್ಲಿ ಸಂಭವಿಸಿರುವ ಗಲಾಟೆಯಲ್ಲಿ ಎರಡೂ ಗುಂಪಿನ ಸಾವಿರಾರು ಜನರಿಂದ ಘರ್ಷಣೆ ನಡೆದಿದೆ.

ಗುಂಪು ಚದುರಿಸಲು ಪೊಲೀಸರ ಹರಸಾಹಸ ಪಟ್ಟಿದ್ದಾರೆ. ಕೊನೆಗೆ ಲಘು ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿಯನ್ನು ನಿಯಂತ್ರಣ ಮಾಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com