ದಚ್ಚು ಮೆಚ್ಚುವಂತ ಕೆಲಸ ಮಾಡಿದ ಮಜಾ ಸ್ಟಾರ್​​ : ಗಜನ ದಾರಿಯಲ್ಲಿ ನಡೆದ ಸೃಜ ಮಾಡಿದ್ದೇನು..?

ಬೆಂಗಳೂರು  : ಎಲ್ಲಾರಿಗೂ ಗೊತ್ತಿರುವಂತೆ  ದರ್ಶನ ಪ್ರಾಣಿ ಪ್ರಿಯ. ದರ್ಶನ್​ ತಮ್ಮ ಗೆಸ್ಟ್​ ಹೌಸ್​ನ ಮಿನಿ ಮೃಗಾಲಯವನ್ನಾಗಿ  ಮಾಡಿದ್ದಾರೆ. ಅಷ್ಟಲ್ಲದೇ ದಚ್ಚು ಮೈಸೂರಿನ ಮೃಗಾಲಯದಲ್ಲಿ ಹುಲಿಯನ್ನು ದತ್ತು ಪಡೆದಿದ್ದಾರೆ. ಇದೀಗ  ದಾಸನ  ಹಾದಿಯಲ್ಲೇ ಕುಚುಕ್ಕು ಗೆಳೆಯ ಸೃಜನ ಕೂಡ ನಡೆಯುತ್ತಿದ್ದಾರೆ.

srujan lokesh and darshan ಗೆ ಚಿತ್ರದ ಫಲಿತಾಂಶ

ಟಾಕಿಂಗ್​ ಸ್ಟಾರ್​ ಸೃಜನ್ ಮೈಸೂರು ಅಭಯಾರಣ್ಯದಲ್ಲಿ ಶ್ವೇತವರ್ಣದ ಹುಲಿಯನ್ನು ದತ್ತು ಪಡೆದುಕೊಂಡಿದ್ದು, ಈ ವಿಷಯವನ್ನು ಸ್ವತಃ ದರ್ಶನ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇನ್ನು ಸೃಜನ್​ನ ಈ ಕೆಲಸಕ್ಕೆ ಎಲ್ಲರಿಂದ ಅಭಿನಂದನೆಗಳ ಸುರಿಮಳೆಯಾಗುತ್ತಿದೆ.

ದರ್ಶನ್​ ಈ ವಿಷಯದ ಬಗ್ಗೆ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದು, “ಮೈಸೂರು ಅಭಯಾರಣ್ಯದಲ್ಲಿ ಶ್ವೇತವರ್ಣದ ಹುಲಿಯನ್ನು ದತ್ತು ಪಡೆದುಕೊಂಡಿರುವ ನನ್ನ ಗೆಳೆಯ ಸೃಜನ್‍ಗೆ ಅಭಿನಂದನೆಗಳು. ವನಜೀವಿ ಸಂಪತ್ತು ಸಂರಕ್ಷಣೆ ನಮ್ಮೆಲ್ಲರ ಹೊಣೆ. ಅದಕ್ಕೆ ಅನುಗುಣವಾಗಿ ನಮ್ಮ ಕೈಲಾದ ಸೇವೆಯನ್ನು ಮಾಡೋಣ” ಎಂದು ಸಂತಸದಿಂದ ಜಗ್ಗುದಾದ ಟ್ವೀಟ್ ಮಾಡಿದ್ದಾರೆ.

 

5 thoughts on “ದಚ್ಚು ಮೆಚ್ಚುವಂತ ಕೆಲಸ ಮಾಡಿದ ಮಜಾ ಸ್ಟಾರ್​​ : ಗಜನ ದಾರಿಯಲ್ಲಿ ನಡೆದ ಸೃಜ ಮಾಡಿದ್ದೇನು..?

Leave a Reply

Your email address will not be published.