ನಾನು ದಾದಾನ ದೊಡ್ಡ ಅಭಿಮಾನಿ : ಸಾಹಸಸಿಂಹನನ್ನು ನೆನದು ಪತ್ರ ಬರೆದ ಕಿಚ್ಚ..!

ಬೆಂಗಳೂರು : ಎಲ್ಲೆಡೆ ಕರುನಾಡ ಕರ್ಣ, ಸಾಹಸಸಿಂಹ ದಿವಂಗತ ವಿಷ್ಣುವರ್ಧನ್​ರ 68ನೇ ಹುಟ್ಟುಹಬ್ಬವನ್ನು ಸಂಭ್ರಮಿಸುತ್ತಿದ್ದಾರೆ. ದೊಡ್ಡ ಅಭಿಮಾನಿಗಳ ಬಳಗ ಹೊಂದಿರುವ ವಿಷ್ಣು ದಾದಾಗೆ ಸಾಮಾನ್ಯ ಜನರಲ್ಲದೇ ಸ್ಟಾರ್​ ನಟರು ಕೂಡ ಅಭಿಮಾನಿಗಳು.

ಅಪಾರ ಅಭಿಮಾನಿಗಳನ್ನು ಹೊಂದಿರುವ ಕೋಟಿಗೊಬ್ಬನ ನಟನೆಗೆ ಸ್ಟಾರ್​ ನಟರು ಕೂಡ ಫಿದಾ ಆಗಿದ್ರು. ಆ ಸಾಲಿನಲ್ಲಿ ಕಿಚ್ಚ ಸುದೀಪ್​ ಮೊದಲಿಗರು, ಸುದೀಪ್​ಗೆ ವಿಷ್ಣುವರ್ಧನ್​ ಆದ್ರೆ ಎಲ್ಲಿಲ್ಲದ  ಪ್ರೀತಿ, ಅಭಿಮಾನ, ಗೌರವ, ದಾದಾನ ಹಾಕಿಕೊಂಡು ಸಿನಿಮಾ ನಿರ್ದೇಶನ ಮಾಡಬೇಕೆಂದು ಕನಸು ಕೂಡ ಕಿಚ್ಚನಿಗೆ ಇತ್ತು. ಇಂದು ಅಭಿನಯ ಭಾರ್ಗವ್​ ವಿಷ್ಣು ಜೀ ಹುಟ್ಟುಹಬ್ಬದಂದು ಕಿಚ್ಚ ಪ್ರೀತಿಯಿಂದ ಪತ್ರ ಬರೆದಿದ್ದಾರೆ.

ನಾನು ಅವರ ಹೆಸರಿನ ಹಚ್ಚೆ ಹಾಕಿಸಿಕೊಳ್ಳದೇ ಇರಬಹುದು. ಅವರಿಗಾಗಿ ಏನನ್ನು ನೀಡದೇ ಇರಬಹುದು. ನಾನು ಅವರ ಮುಂದೆ ಏನೇನೂ ಅಲ್ಲ. ಆದರೇ ನಾನು ಎಂದೆಂದಿಗೂ ವಿಷ್ಣು ದಾದರ ದೊಡ್ಡ ಅಭಿಮಾನಿ ಐ ಲವ್​ ಯೂ ವಿಷ್ಣು ಸರ್​ ಎಂದು ಬಾವುಕತೆಯಿಂದ ಕಿಚ್ಚ ಬರೆದಿದ್ದಾರೆ.

 

ಧನ್ಯವಾದಗಳು ವಿಷ್ಣು ಸಾರ್ ನಿಮ್ಮ ಜೀವನದಲ್ಲಿ ಪ್ರವೇಶ ಮಾಡಲು ಅನುಕೂಲ ಮಾಡಿಕೊಟ್ಟಿದ್ದಕ್ಕೆ. ಥಾಂಕ್ಯೂ ನಿಮಗೆ ಆ್ಯಕ್ಷನ್ ಎಂದು ಹೇಳಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ಎನ್ನುತ್ತ ಕಿಚ್ಚ ದಾದಾ ಮೇಲಿನ ಅಭಿಮಾನವನ್ನು ಪತ್ರದಲ್ಲಿ ತೋರಿಸಿದ್ರು.

Leave a Reply

Your email address will not be published.