ಮನುಷ್ಯ ಪ್ರಾಣಿಗೆ ಮನೆಯಲ್ಲೇ ಮಂಗಳಾರತಿ : ಪ್ರತಾಪ್​ ವಿರುದ್ಧ ಪ್ರಕಾಶ್ ರೈ ವ್ಯಂಗ್ಯ..!

ಮೈಸೂರು : ಮನುಷ್ಯ ಪ್ರಾಣಿಗೆ ಮನೆಯಲ್ಲೇ ಮಂಗಳಾರತಿ, ಹೀಗೂ ಉಂಟೆ ಎಂದು ಸಂಸದ ಪ್ರತಾಪ್ ಸಿಂಹರಿಗೆ ಟ್ವೀಟರ್ ಮೂಲಕ ಪ್ರಕಾಶ್ ರೈ ವ್ಯಂಗ್ಯವಾಡಿದ್ದಾರೆ.

ಕೇಂದ್ರ ಪ್ರಕೃತಿ ವಿಕೋಪ ತಂಡ ಕೊಡಗು ಜಿಲ್ಲೆಯ ಹೆಬ್ಬೆಟ್ಟಗೆರೆ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾಗ ಸಂಸದ ಪ್ರತಾಪಸಿಂಹ ಅವರಿಗೆ ಅಲ್ಲಿನ ಮುಖಂಡ ದೇವಯ್ಯ ಕ್ಲಾಸ್ ತೆಗೆದುಕೊಂಡ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಇದರ ಬೆನ್ನಲ್ಲೇ ಪ್ರತಾಪಸಿಂಹ ಅವರು ಫೇಸ್ ಬುಕ್ ಲೈವ್ ಗೆ ಬಂದು ದೇವಯ್ಯ ಅವರ ವಯಸ್ಸಿನ ಅಂತರ ನೋಡಿ ಸುಮ್ಮನಾಗಿದ್ದಿನಿ ಎಂದು ಹೇಳಿಕೊಂಡಿದ್ದರು. ಈ ವಿಷಯದ ಬಗ್ಗೆ ಪ್ರಕಾಶ್​ ರೈ ಟ್ವಿಟರ್​ನಲ್ಲಿ ಪ್ರತಾಪ್​ ಸಿಂಹರನ್ನು ವ್ಯಂಗ್ಯವಾಡಿದ್ದಾರೆ.

ಈ  ವಿಷಯದ  ಬೆನ್ನಲ್ಲೇ ಟ್ವೀಟ್ ಮಾಡಿರುವ ನಟ ಪ್ರಕಾಶ್ ರೈ ‘ಮನುಷ್ಯ ಪ್ರಾಣಿಗೆ ಮನೆಯಲ್ಲೇ ಮಂಗಳಾರತಿ..ಹೀಗೂ ಉಂಟೆ ಎಂದು ಪ್ರತಾಪ್​ ಸಿಂಹ ಬಗ್ಗೆ ವ್ಯಂಗ್ಯವಾಗಿ ಬರೆದುಕೊಂಡಿದ್ದಾರೆ.

Leave a Reply

Your email address will not be published.