ಜಾರಕಿಹೊಳಿ ಬ್ರದರ್ಸ್​ರೊಂದಿಗೆ ಸಿಎಂ ಸಂಧಾನ ಯಶಸ್ವಿ : ಸಹೋದರರ ಬೇಡಿಕೆಗೆ HDK ಹೇಳಿದ್ದೇನು?

ಬೆಂಗಳೂರು :  ಜಾರಕಿಹೊಳಿ ಸಹೋದರರು ಸಮ್ಮಿಶ್ರ ಸರ್ಕಾರದಲ್ಲಿ ಸೃಷ್ಟಿಸಿದ್ದ ರಾಜಕೀಯ ಬಿರುಗಾಳಿ ಸದ್ಯಕ್ಕೆ ನಿಂತಂತೆ ಕಾಣುತ್ತಿದೆ. ಸಿಎಂ ಕುಮಾರಸ್ವಾಮಿ ಸಂಧಾನ ಸಕ್ಸಸ್ ಆಗಿದ್ದು, ಭಿನ್ನಮತ ಶಮನವಾಗಿದೆ ಎನ್ನಲಾಗುತ್ತಿದೆ.

ಇಂದು ತಾಜ್ ವೆಸ್ಟ್ ಎಂಡ್ ಹೊಟೇಲ್ ನಲ್ಲಿ ಜಾರಕಿಹೊಳಿ ಸಹೋದರರನ್ನು ಸಿಎಂ ಕುಮಾರಸ್ವಾಮಿರನ್ನು ಭೇಟಿ ಮಾಡಿ ಸುಮಾರು 2 ಗಂಟೆಗಳ ಕಾಲ ಚರ್ಚೆ ನಡೆಸಿದ್ರು. ಚರ್ಚೆಯಲ್ಲಿ ಜಾರಕಿಹೊಳಿ ಸಹೋದರರು ಪ್ರಮುಖ ಬೇಡಿಕೆಗಳನ್ನಿಟ್ಟಿದ್ದು, ಅದಕ್ಕೆ ಕುಮಾರಸ್ವಾಮಿ ಬಹುತೇಕ ಒಪ್ಪಿಗೆ ನೀಡಿದ್ದಾರೆ.

H.D Kumara swamy And Ramesh Jaraki koli

ಸಂಧಾನ ಸಭೆ ಬಳಿಕ ಮಾತನಾಡಿದ ಸತೀಶ್ ಜಾರಕಿಹೊಳಿ, ‘ಸಮ್ಮಿಶ್ರ ಸರ್ಕಾರ ಅಂದರೇ ಸಮಸ್ಯೆ ಇದ್ದೇ ಇರುತ್ತೆ.  ಇನ್ನು ನಾವು ಯಾವುದೇ ರೆಸಾರ್ಟ್ ಗೆ ಹೋಗಲ್ಲ. ಎಲ್ಲೂ ಹೋಗಲ್ಲ. ನಾವು ಡಿಸಿಎಂ ಪಟ್ಟಕ್ಕೆ ಬೇಡಿಕೆ ಇಟ್ಟಿಲ್ಲ. ಬಳ್ಳಾರಿ ಜಿಲ್ಲೆಯ ಎಸ್ಟಿ ಸಮುದಾಯಕ್ಕೆ ಸಚಿವ ಸ್ಥಾನ ನೀಡುವಂತೆ ಬೇಡಿಕೆ ಇದೆ,  ಆದರೆ ಸಮಸ್ಯೆಗಳನ್ನ ಬಗೆಹರಿಸುವುದಾಗಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಭರವಸೆ ನೀಡಿದ್ದಾರೆ’ ಎಂದು ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.

 

Leave a Reply

Your email address will not be published.