ಮಂಡ್ಯ : ಒಡವೆ ಹರಾಜು ಪ್ರಕ್ರಿಯೆ ನಿಲ್ಲಿಸಲು ಆಗ್ರಹಿಸಿ ಬ್ಯಾಂಕ್ ಮುಂದೆ ರೈತರ ಪ್ರತಿಭಟನೆ..

ಮಂಡ್ಯ : ಬ್ಯಾಂಕ್ ನಲ್ಲಿ‌ ರೈತರ ಒಡವೆ ಹರಾಜು ಪ್ರಕ್ರಿಯೆಯನ್ನು ಖಂಡಿಸಿ ಬ್ಯಾಂಕ್ ಗೆ ಮುತ್ತಿಗೆ ಹಾಕಿ ನೂರಾರು ರೈತರು ಪ್ರತಿಭಟನೆ ನಡೆಸಿದ್ದಾರೆ. ಮಂಡ್ಯ ನಗರದ ವಿವಿ ರಸ್ತೆಯಲ್ಲಿ SBI ಬ್ಯಾಂಕ್ ಮುಂದೆ ರೈತರ ಧರಣಿ ನಡೆದಿದೆ.

ಬ್ಯಾಂಕ್ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ರೈತರ ಆಕ್ರೋಶ ಮಳೆ ಬೆಳೆ ಇಲ್ಲದೆ ಸಂಕಷ್ಟದಲ್ಲಿರೋ ಜಿಲ್ಲೆಯ ರೈತರ ಹಿತ ಕಾಯಲು ರೈತರ ಒತ್ತಾಯಿಸಿದ್ದಾರೆ. ತಕ್ಷಣವೆ ಒಡವೆ ಹರಾಜು ಪ್ರಕ್ರಿಯೆ ನಿಲ್ಲಿಸುವಂತೆ ರೈತರ ಆಗ್ರಹಿಸಿದ್ದಾರೆ.

ಜಿಲ್ಲಾ ರೈತ ಸಂಘದ ಅಧ್ಯಕ್ಷ. ಶಂಭೂನಹಳ್ಳಿ ಸುರೇಶ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿದ್ದು, ಸಂಕಷ್ಟದಲ್ಲಿರೋ ರೈತರ ಒಡವೆ ಹರಾಜು ಹಾಕಲು ಮುಂದಾದ ಬ್ಯಾಂಕ್ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ರೈತರ ಪ್ರತಿಭಟನೆಗೆ ಮಣಿದು ಬ್ಯಾಂಕ್ ಅಧಿಕಾರಿಗಳು ಒಡವೆ ಹರಾಜು ಪ್ರಕ್ರಿಯೆ ನಿಲ್ಲಿಸಿದ್ದಾರೆ.

Leave a Reply

Your email address will not be published.