ನಾನು ಅಪ್ಪಟ ಕಾಂಗ್ರೆಸಿಗ, ನನ್ನ ಕಣ ಕಣದಲ್ಲೂ ಕಾಂಗ್ರೆಸ್ ಇದೆ : ಸಚಿವ ಪುಟ್ಟರಂಗಶೆಟ್ಟಿ

ಚಾಮರಾಜನಗರ : ‘ ನಾನು ಅಪ್ಪಟ ಕಾಂಗ್ರೆಸ್ಸಿಗ, ನನ್ನ ಕಣ ಕಣದಲ್ಲೂ ಕಾಂಗ್ರೆಸ್ ಇದೆ ‘ ಎಂದು ಚಾಮರಾಜನಗರದಲ್ಲಿ ಸಚಿವ ಪುಟ್ಟರಂಗಶೆಟ್ಟಿ ಹೇಳಿಕೆ ನೀಡಿದ್ದಾರೆ. ‘ ಅಧಿಕಾರದ ದಾಹ ನನಗಿಲ್ಲ, ಕಾಂಗ್ರೆಸ್ ಬಿಡುವ ಪ್ರಶ್ನೆ ಇಲ್ಲ. ಕಾಂಗ್ರೆಸ್ ಗೆ ಸಿದ್ದಾಂತವಿದೆ, ಹೈಕಮಾಂಡ್ ಇದೆ, ಸಿದ್ದರಾಮಯ್ಯ ಇದ್ದಾರೆ. ಬಿಜೆಪಿಯವರು ಮೂವತ್ತು ಜನರು ರಾಜಿನಾಮೆ ನೀಡುತ್ತಾರೆಂದು ಹಗಲುಗನಸು ಕಾಣುತ್ತಿದ್ದಾರೆ. ಕಾಂಗ್ರೆಸ್ ನ ಯಾವ ಎಂಎಲ್ಎ ಕೂಡ ರಾಜಿನಾಮೆ ನೀಡುವುದಿಲ್ಲ ‘ ಎಂದಿದ್ದಾರೆ.

‘ ಚುನಾವಣಾ ಪೂರ್ವದಲ್ಲಿ ಬಿಜೆಪಿಯವರು ನನ್ನನ್ನು ಸಂಪರ್ಕಿಸಿದ್ದರು, ಆದರೆ ಈಗ ಯಾರು ಸಂಪರ್ಕಿಸಿಲ್ಲ. ಸಮ್ಮಿಶ್ರ ಸರ್ಕಾರ ಐದು ವರ್ಷ ಸುಭದ್ರವಾಗಿರುತ್ತದೆ. ಸರ್ಕಾರ ರಚನೆಯಾಗಿ ಮೂರುವರೆ ತಿಂಗಳಾಗಿದೆ ಅಷ್ಟೆ, ಕೆಲವ ರಿಗೆ ಸಚಿವ ಸ್ಥಾನ ಸಿಕ್ಕಿದೆ, ಕೆಲವರಿಗೆ ಸಿಕ್ಕಿಲ್ಲ ಹಾಗಾಗಿ ಕೆಲವರಿಗೆ ಅಸಮಾಧಾನವಿದೆ. ಸಮನ್ವಯ ಸಮಿತಿಯಲ್ಲಿ ಸಮಸ್ಯೆ ಗಳನ್ನ ಸಿದ್ದರಾಮಯ್ಯ ಬಗೆ ಹರಿಸಲಿದ್ದಾರೆ ‘ ಎಂದು ಹೇಳಿದ್ದಾರೆ.

‘ ಹನೂರು ಶಾಸಕ ನರೇಂದ್ರರ ವರಿಗೆ ಸಚಿವ ಸ್ಥಾನ ನೀಡಿದರೆ ನನ್ನ ಅಭ್ಯಂತರವಿಲ್ಲ, ಅವರು ಮೂರು ಬಾರಿ ಗೆದ್ದಿದ್ದಾರೆ. ನಾನು ಹೈಕಮಾಂಡ್ ಹೇಳಿದಂತೆ ಕೇಳುತ್ತೇನೆ. ಡಿಕೆ ಶಿವಕುಮಾರ್ ಹಿರಿಯರಿದ್ದಾರೆ, ಇಡಿ ನೋಟೀಸು ನೀಡಿರುವುದು ನನಗೆ ಗೊತ್ತಿಲ್ಲ ‘ ಎಂದಿದ್ದಾರೆ.

One thought on “ನಾನು ಅಪ್ಪಟ ಕಾಂಗ್ರೆಸಿಗ, ನನ್ನ ಕಣ ಕಣದಲ್ಲೂ ಕಾಂಗ್ರೆಸ್ ಇದೆ : ಸಚಿವ ಪುಟ್ಟರಂಗಶೆಟ್ಟಿ

Leave a Reply

Your email address will not be published.