ಸಹಶಿಕ್ಷಕನ ಮೇಲೆ ಹಲ್ಲೆಗೆ ಮಗನನ್ನು ಛೂ ಬಿಟ್ಟ ಪ್ರಿನ್ಸಿಪಲ್​ : ಗಂಭೀರ ಗಾಯಗೊಂಡ ಶಿಕ್ಷಕ..!

ತುಮಕೂರು : ಸಹ ಶಿಕ್ಷಕನ ಮೇಲೆ ಸೇಡು ತೀರಿಸಿಕೊಳ್ಳಲು ಮುಖ್ಯ ಶಿಕ್ಷಕಿ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ತುಮಕೂರಿನ ಪಾವಗಡ ತಾಲೂಕಿನ ಲಿಂಗದಹಳ್ಳಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.

ಸಹ ಶಿಕ್ಷಕ ಮಂಜುನಾಥ್ ನ ಮೇಲೆ ಮುಖ್ಯ ಶಿಕ್ಷಕಿ ಲಕ್ಷ್ಮಿ ದೇವಮ್ಮ ತನ್ನ ಮಗನನ್ನು ಛೂ ಬಿಟ್ಟು ಹಲ್ಲೆ ನಡೆಸಿದ್ದು, ಮುಖ್ಯ ಶಿಕ್ಷಕಿ ಸರಿಯಾಗಿ ತರಗತಿಗೆ ಬರದಿದ್ದುದನ್ನು ಖಂಡಿಸಿದ್ದ ಸಹ ಶಿಕ್ಷಕ ಮಂಜುನಾಥ್ ವಿದ್ಯಾರ್ಥಿಗಳ ಪೋಷಕರ ಬಳಿ ಮುಖ್ಯ ಶಿಕ್ಷಕಿ ಮೇಲೆ ದೂರು ಹೇಳಿದ್ದಕ್ಕೆ ಕೋಪಗೊಂಡ ಮುಖ್ಯಶಿಕ್ಷಕಿ ತನ್ನ ಮಗನನ್ನು ಛೂಬಿಟ್ಟು ಕೃತ್ಯ ನಡೆಸಿದ್ದಾರೆ.

ಶಿಕ್ಷಕ ಮಂಜುನಾಥ್​ಗೆ ತಲೆ ಮತ್ತು ಕೆನ್ನೆ ಭಾಗಕ್ಕೆ ಗಂಭೀರ ಗಾಯವಾಗಿದ್ದು, ಈ ಘಟನೆಗೆ ಸಂಬಂಧ ಸ್ಥಳೀಯ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com